‘ಚಾಯ್ ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ’-ಟ್ರಂಪ್

ಅಹಮದಾಬಾದ್ :

       ‘ಚಾಯ್ ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಣಗಾನ ಮಾಡಿದ್ದಾರೆ.

     ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿರುವ ಡೊನಾಲ್ಡ್ ಟ್ರಂಪ್, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿರುವ ಮೊಟರಾ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಮೋದಿಯ ಗುಣಗಾನ ಮಾಡಿದ್ದು ಹೀಗೆ…..

     ಮೋದಿ ಗುಜರಾತ್​ ಮಗನಷ್ಟೇ ಅಲ್ಲ ಮೋದಿ ಇಡೀ ದೇಶದ ಪುತ್ರ. ಮೋದಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ ಯಶಸ್ವಿ ನಾಯಕರಾಗಿದ್ದಾರೆ. ಚಾಯ್ ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ. ಮೋದಿ ಅತ್ಯದ್ಬುತ ನಾಯಕ, ಹಗಲು-ರಾತ್ರಿ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಮೋದಿ ಭಾರತದ ಚಾಂಪಿಯನ್. ಸ್ವತಂತ್ರ ಮತ್ತು ಸಮೃದ್ಧ ದೇಶವಾದ ಭಾರತ ಬೆಳೆದಿದ್ದು ಇಡೀ ವಿಶ್ವಕ್ಕೆ ಮಾದರಿ. ಕಳೆದ 70 ವರ್ಷಗಳಲ್ಲಿ ಭಾರತದ ಆರ್ಥಿಕತೆ 6 ಪಟ್ಟು ಹೆಚ್ಚು ಬೆಳೆದಿದೆ ಎಂದು ಪ್ರದಾನಿಯವರನ್ನು ಹಾಡಿ ಹೊಗಳಿದ್ದಾರೆ. 

      ಇದೇ ವೇಳೆ ವಿಶ್ವದ ಭಯೋತ್ವದಕತೆಗೆ ಅಮೇರಿಕಾದಿಂದ ಎಂದೆಂದಿಗೂ ವಿರೋಧವಿದೆ. ಯಾವತ್ತೂ ಭಯೋತ್ಪಾದನೆಗೆ ಪ್ರೋತ್ಸಾಹ ನೀಡೋದಿಲ್ಲ. ಭಯೋತ್ಪಾದನೆಯನ್ನೂ ಸಹಿಸೋದಿಲ್ಲ ಎಂಬುದಾಗಿ ಹೇಳುವ ಮೂಲಕ ಪಾಕ್ ಗೆ ಖಡಕ್ ಎಚ್ಚರಿಕೆಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap