ತುಮಕೂರು:
ಗಾಂಜಾ ವಿಚಾರಕ್ಕೆ ಜೈಲಿನೊಳಗೆ ಎರಡು ರೌಡಿ ತಂಡಗಳ ಪರಸ್ಪರ ಹೊಡೆದಾಡಿಕೊಂಡ ಘಟನೆ ತುಮಕೂರು ಜೈಲಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ರೌಡಿಶೀಟರ್ ಗಳಾದ ರೋಹಿತ್ ಮತ್ತು ಚಂದ್ರಮೌಳಿ ನಡುವೆ ಗಾಂಜಾ ವಿಷಯಕ್ಕಾಗಿ ಮಾರಾಮಾರಿ ನಡೆದಿದೆ. ರೌಡಿಶೀಟರ್ ಗಳಾದ ಹರಿ, ಮಧು, ಕೇಶವ, ರೋಹಿತ್ ಮತ್ತು ಬೆಂಗಳೂರು ಮೂಲದ ಆರೊಪಿಗಳಾದ ಚಂದ್ರಮೌಳಿ, ಪ್ರದೀಪ ಮತ್ತು ಗ್ಯಾಂಗ್ ನಡುವೆ ಗಾಂಜಾ ವಿಷಯಕ್ಕೆ ಹೊಡೆದಾಟ ನಡೆದಿದೆ.
ಜೈಲು ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಪ್ರಯತ್ನಿಸಿದ್ದಾರೆ. ಜಗಳ ನಿಲ್ಲದ ಹಂತ ತಲುಪಿದಾಗ, ಅಧಿಕಾರಿಗಳು ಲಾಠಿ ಚಾರ್ಜ್ ನಡೆಸಿ ಘರ್ಷಣೆಯನ್ನು ನಿಲ್ಲಿಸಿದ್ದಾರೆ. ಇದರಿಂದ ಹರೀಶ್, ಪ್ರದೀಪ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಪ್ರದೀಪ್‍ನನ್ನು ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ.
ಕೊಲೆ ಯತ್ನ ಪ್ರಕರಣದಲ್ಲಿ ಕಳೆದ ಎರಡು ತಿಂಗಳ ಹಿಂದೆ ಪ್ರದೀಪ ಜೈಲು ಸೇರಿದ್ದ. ತುಮಕೂರು ಮೂಲದ ಪ್ರದೀಪ ರೌಡಿಶೀಟರ್ ಕೂಡಾ ಆಗಿದ್ದಾನೆ. ಘಟನೆಯ ಬಳಿಕ ಚಂದ್ರಮೌಳಿ ಹಾಗೂ ರೋಹಿತ್ ಗ್ಯಾಂಗ್‍ಗಳನ್ನು ಪ್ರತ್ಯೇಕವಾಗಿ ಬೇರೆ ಬೇರೆ ಸೆಲ್‍ಗಳಿಗೆ ಕಳುಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ