ಅಟೋಮೊಬೈಲ್ ಶಾಪ್’ನಲ್ಲಿ ಅಗ್ನಿ ಅವಘಡ ; ಇಬ್ಬರ ಸಾವು!!

ಜೋರ್ಹತ್(ಅಸ್ಸೋಂ):

      ಆಟೋಮೊಬೈಲ್ ಶಾಪ್​ವೊಂದರಲ್ಲಿ ನಿನ್ನೆ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಸಾವಿಗೀಡಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

      ನಿನ್ನೆ ಮಧ್ಯರಾತ್ರಿ ಆಟೋಮೊಬೈಲ್​ ಮಳಿಗೆಗೆ ಬೆಂಕಿ ತಗುಲಿದ್ದು,ಆಟೋಮೊಬೈಲ್​ ಅಂಗಡಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್​ನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಇದರಿಂದ ಅಂಗಡಿ ಸಮೀಪವಿದ್ದ ನಾಲ್ಕು ಮನೆಗಳಿಗೂ ಸಹ ಬೆಂಕಿ ಆವರಿಸಿಕೊಂಡಿದ್ದು, ಮಧ್ಯರಾತ್ರಿ 1.30ರ ಸುಮಾರಿಗೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

     ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap