15 ರಿಂದ 21 ಸಾವಿರಕ್ಕೆ ಏರಿಕೆಯಾಯ್ತು ESI ಆದಾಯ ಮಿತಿ!!

ದೆಹಲಿ:

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ ಇಂದು ಮಂಡಿಸಿದ್ದಾರೆ. 

      ವಿತ್ತ ಸಚಿವ ಅರುಣ್​ ಜೇಟ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣದಿಂದಾಗಿ ಅವರ ಅನುಪಸ್ಥಿತಿಯಲ್ಲಿ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಪಿಯೂಷ್​ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್​ ಅನ್ನು ಮಂಡಿಸಿದ್ದಾರೆ.

ಕೇಂದ್ರ ಬಜೆಟ್ 2019 : ಅಪ್‍ಡೇಟ್ಸ್!!!

      ಕಾರ್ಮಿಕ ವರ್ಗಕ್ಕೂ ಮಧ್ಯಂತರ ಬಜೆಟ್ ಸಿಹಿ ಸುದ್ದಿ ನೀಡಿದ್ದು,  ಬೋನಸ್ ಮಿತಿಯನ್ನು 7 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹಾಗೂ ಕಾರ್ಮಿಕರ ಆದಾಯ ಮಿತಿಯನ್ನು 21 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇಎಸ್‌ಐ ಆದಾಯ ಮಿತಿಯನ್ನು 15 ಸಾವಿರ ರೂ. ಗಳಿಂದ 21 ಸಾವಿರಕ್ಕೆ ಏರಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ