ನ.30ರವರೆಗೆ ಅನ್ ಲಾಕ್ 5.0 ಮಾರ್ಗಸೂಚಿ ವಿಸ್ತರಣೆ!!

ನವದೆಹಲಿ : 

     ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದ್ದ ಅನ್ ಲಾಕ್ 5.0 ಮಾರ್ಗಸೂಚಿಯನ್ನು ನವೆಂಬರ್ 30ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

     ಈ ಕುರಿತಂತೆ ಕೇಂದ್ರ ಮಾನವ ಅಭಿವೃದ್ಧಿ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಈ ಮೊದಲು ಅಕ್ಟೋಬರ್ 30ಕ್ಕೆ ಮುಕ್ತಾಯಗೊಳ್ಳುವಂತೆ ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗ ಸೂಚಿ ಜಾರಿಗೊಳಿಸಿತ್ತು. ಈ ಮಾರ್ಗಸೂಚಿಯಲ್ಲಿ ಶೇ.50% ರಷ್ಟು ಜನರನ್ನು ಒಳಗೊಂಡು ಸಿನಿಮಾ ಥಿಯೇಟರ್ ತೆರೆಯಲು ಅನುಮತಿ ಕೂಡ ನೀಡಲಾಗಿತ್ತು. ಸ್ಪಿಮ್ಮಿಂಗ್ ಪೂಲ್ ಆರಂಭಕ್ಕೆ ಅನುಮತಿ ನೀಡಲಾಗಿತ್ತು.

      ಈ ಅನ್ ಲಾಕ್ 5.0 ಮಾರ್ಗ ಸೂಚಿಯನ್ನು ಇದೀಗ ನವೆಂಬರ್ 30ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.

     ಮಾರ್ಗಸೂಚಿ ಅನ್ವಯ ದೇಶಾದ್ಯಂತ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್ ಡೌನ್ ನವೆಂಬರ್ 30ರ ತನಕ ಮುಂದುವರೆಯಲಿದೆ. ಉಳಿದ ಪ್ರದೇಶಗಳಲ್ಲಿ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಪ್ರಕಟಿಸಿದ ನಿಯಮಗಳು ಜಾರಿಯಲ್ಲಿರುತ್ತವೆ.  

     ಅಂತರರಾಜ್ಯಗಳ ನಡುವೆ ವಾಹನ, ವ್ಯಕ್ತಿಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಂತರರಾಜ್ಯ ಸಂಚಾರಕ್ಕೆ ಪ್ರತ್ಯೇಕವಾದ ಯಾವುದೇ ಪಾಸ್‌ಗಳ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap