ವಡೋದರಾ:
ಚಲಿಸುತ್ತಿದ್ದ ವ್ಯಾನ್ ನಿಂದ ಇಬ್ಬರು ಶಾಲಾ ಬಾಲಕಿಯರು ಬಿದ್ದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ. ಮಂಜಲ್ಪುರದ ತುಳಸಿ ಶ್ಯಾಮ್ ಸೊಸೈಟಿಯಲ್ಲಿ ಜೂನ್ 19 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್, ವೇಗವಾಗಿ ಚಲಿಸುತ್ತಿದ್ದ ವ್ಯಾನ್ ಹಿಂದಿನಿಂದ ಬೇರೆ ಯಾವುದೇ ವಾಹನ ಬರುತ್ತಿರದ ಕಾರಣ ದೊಡ್ಡ ಅವಘಡವೊಂದು ತಪ್ಪಿದೆ.
ಇಡೀ ಘಟನೆಯು ಪ್ರದೇಶದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳು ವ್ಯಾನ್ನಿಂದ ಬಿದ್ದ ತಕ್ಷಣ, ನಿವಾಸಿಗಳು ತಕ್ಷಣ ಪ್ರತಿಕ್ರಿಯಿಸಿದರು ಮತ್ತು ಹುಡುಗಿಯರಿಗೆ ಸಹಾಯ ಮಾಡಲು ಧಾವಿಸಿದ್ದಾರೆ.
ವ್ಯಾನ್ ಚಾಲಕನ ಬಂಧನ: ಇದು ವ್ಯಾನ್ ಚಾಲಕನ ನಿರ್ಲಕ್ಷ್ಯವನ್ನು ಕಾಣಬಹುದಾಗಿದ್ದು, ಆತ ವ್ಯಾನಿನಿನ ಹಿಂಬಾಗಿಲು ಸರಿಯಾಗಿ ಮುಚ್ಚಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಗಮನ ಹರಿಸದೆ ಗಾಡಿ ನಡೆಸುತ್ತಿದ್ದ ಎನ್ನಲಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಆತ ಚಾಲನೆ ಮಾಡುವಾಗ ಇಬ್ಬರು ಹುಡುಗಿಯರು ಕಾರಿನ ಹಿಂಭಾಗದಿಂದ ಬಿದ್ದಿದ್ದಾರೆ ಎನ್ನುವುದನ್ನು ಮರೆತು ಮುಂದೆ ಹೋಗಿದ್ದಾನೆ ಎನ್ನಲಾಗಿದೆ.