ವಿಶ್ವಸಂಸ್ಥೆ:
ಪುಲ್ವಾಮ ಉಗ್ರ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಇನ್ನೂ ಖಂಡನಾ ನಿರ್ಣಯದಲ್ಲಿ ಎಲ್ಲ ದೇಶಗಳು ಅಂತಾರಾಷ್ಟ್ರೀಯ ಕಾನೂನಿನ ಮಿತಿಯೊಳಗೆ ಭಾರತ ಸರ್ಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದೆ.
ಹೌದು, ಪಾಕಿಸ್ತಾನ ಬೆಂಬಲಿತ ಜೈಷ್-ಎ-ಮಹಮದ್ ಉಗ್ರರಿಂದ ಫೆ.14ರಂದು ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡ ಬರ್ಬರ ಮತ್ತು ಹೇಡಿತನದ ಮಾನವ ಬಾಂಬ್ ದಾಳಿಯನ್ನು ಹೀನಾಯ ಮತ್ತು ಹೇಡಿತನದ ಕೃತ್ಯ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಉಗ್ರವಾಗಿ ಖಂಡಿಸಿದೆ.
ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ-ಈ ಐದು ಖಾಯಂ ಸದಸ್ಯ ದೇಶಗಳನ್ನೂ ಒಳಗೊಂಡಿರುವ ಪ್ರಬಲ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಈ ಕೃತ್ಯಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಕುಮ್ಮಕ್ಕು ನೀಡಿದ ದಾಳಿಕೋರರು, ಹಣಕಾಸು ನೆರವು ನೀಡಿದವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂಬುದನ್ನು ಪ್ರತಿಪಾದಿಸಿದೆ.
ಭಯೋತ್ಪಾದನೆ ಕೃತ್ಯ ಎಸಗಿರುವವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಿ ಕಾನೂನಿಗೆ ಒಪ್ಪಿಸುವ ಅಗತ್ಯವಿದೆ ಎಂಬುದನ್ನೂ ಭದ್ರತಾ ಮಂಡಳಿ ಹೇಳಿದೆ.
ಸಂಯುಕ್ತ ರಾಷ್ಟ್ರಗಳ ಈ ಹೇಳಿಕೆಯಿಂದ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು, ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ