UPSC : ಪೂರ್ವಭಾವಿ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ!!

ನವದೆಹಲಿ :

      ಯುಪಿಎಸ್ಸಿ ನಾಗರಿಕ ಸೇವೆಗಳ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳೆರಡಕ್ಕೂ ಕೇಂದ್ರ ಬದಲಾವಣೆಗೆ ಅವಕಾಶ ನೀಡಿದೆ.

      ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಯುಪಿಎಸ್ಸಿ ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯ 2020 ರ ಪರೀಕ್ಷಾ ದಿನಾಂಕವನ್ನು ಅಕ್ಟೋಬರ್ 4 ಕ್ಕೆ ವಿಸ್ತರಿಸಿದೆ . ಈ ನಡುವಿನಲ್ಲಿ ಅದೇ ಕಾರಣದಿಂದ ಅನೇಕ ಅಭ್ಯರ್ಥಿಗಳು ತಮ್ಮ ಊರಿಗೆ ಮರಳಿದ್ದರು ಮತ್ತು ಆದ್ದರಿಂದ ಪರೀಕ್ಷಾ ಕೇಂದ್ರದಲ್ಲಿ ಬದಲಾವಣೆ ಮಾಡಿಕೊಡಬೇಕು ಅಂತ ಒತ್ತಾಯಿಸಿದರು .

     ಪರೀಕ್ಷಾ ಆಕಾಂಕ್ಷಿಗಳ ಮನವಿಯನ್ನು ಪರಿಗಣಿಸಿ,ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಿದ್ದು, ಈ ಕುರಿತು ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪ್ರಕಟಣೆ ಹೊರಡಿಸಿದೆ.

      upsconline.nic.in ನಲ್ಲಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ

  1. ಮೊದಲ ಹಂತದಲ್ಲಿ, ಪರೀಕ್ಷಾ ಕೇಂದ್ರ ತಿದ್ದುಪಡಿಗಾಗಿ ಜುಲೈ 7 ರಿಂದ 13 ರ ವರೆಗೆ ಅವಕಾಶವಿರುತ್ತದೆ.
  2. ಎರಡನೇ ಹಂತದಲ್ಲಿ ಜುಲೈ 20 ರಿಂದ 24 ರ ವರೆಗೆ ಅವಕಾಶವಿರುತ್ತದೆ.
  3. ಪರಿಷ್ಕೃತ ಪರೀಕ್ಷಾ ಕೇಂದ್ರಗಳನ್ನು ಯಾರು ಮೊದಲಿಗೆ ಆಯ್ಕೆ ಮಾಡುತ್ತಾರೋ, ಅವರಿಗೆ ಮೊದಲು ನಿಗದಿ ಮಾಡಲಾಗುತ್ತದೆ.
  4. ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್‌ ಹಿಂಪಡೆಯಲು ಆಗಸ್ಟ್‌ 01 ರಿಂದ 08, 2020 ರವರೆಗೆ ಅವಕಾಶ ನೀಡಿದೆ.

      ಒಮ್ಮೆ ಮಾತ್ರ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶವಿದ್ದು, ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುವುದು. ಅಭ್ಯರ್ಥಿಗಳು ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link