ಗರ್ಭಿಣಿಯರಿಗೆ ಅಮೆರಿಕಾ ವೀಸಾ ನಿರ್ಬಂಧ!!

ವಾಷಿಂಗ್ಟನ್:

      ವಲಸಿಗರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿರುವ ಅಮೆರಿಕ ಇನ್ನು ಮುಂದೆ ಗರ್ಭಿಣಿಯರಿಗೆ ವೀಸಾ ನೀಡದಂತೆ ನಿರ್ಬಂಧ ವಿಧಿಸಿದೆ.

      ಅಧ್ಯಕ್ಷರಾದ ಬಳಿಕ ವಲಸಿಗರ ವಿರುದ್ಧ ಕಠಿಣ ನೀತಿ ಪ್ರದರ್ಶಿಸುತ್ತಿರುವ ಡೊನಾಲ್ಡ್ ಟ್ರಂಪ್ ಸರ್ಕಾರ ಪ್ರಸವ ಪ್ರವಾಸೋದ್ಯಮ ಎನ್ನಲಾದ ದಂಧೆಯಡಿ ದೇಶಕ್ಕೆ ಪ್ರವೇಶ ಬಯಸುವ ಗರ್ಭಿಣಿಯರಿಗೆ ವೀಸಾ ನೀಡದಂತೆ ನಿರ್ಬಂಧ ವಿಧಿಸಿದೆ.

     “ಅಮೆರಿಕದ ನೆಲದಲ್ಲಿ ಹುಟ್ಟುವ ಮಕ್ಕಳು ಅಮೆರಿಕದ ಪೌರತ್ವವನ್ನು ಸಹಜವಾಗಿಯೇ ಪಡೆಯುವಂತಾಗಲು ವಿದೇಶಿಯರು ಇಂಥ ವೀಸಾವನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ಶ್ವೇತಭವನ ಅಭಿಪ್ರಾಯಪಟ್ಟಿದೆ. ವೀಸಾ ದುರುಪಯೋಗ ಆಗುವುದನ್ನು ತಡೆಗಟ್ಟಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಸರ್ಕಾರ ಸಮರ್ಥಿಸಿಕೊಂಡಿದೆ.

       ಪ್ರಸವ ಪ್ರವಾಸೋದ್ಯಮಕ್ಕಾಗಿ ದೇಶಕ್ಕೆ ಪ್ರವೇಶ ಬಯಸುವ ಗರ್ಭಿಣಿಯರಿಗೆ ತಾತ್ಕಾಲಿಕ ಬಿ-1 ಮತ್ತು ಬಿ-2 ಪ್ರವಾಸಿ ವೀಸಾಗಳನ್ನು ಇನ್ನು ನೀಡಲಾಗುವುದಿಲ್ಲ ಎಂದು ಶ್ವೇತಭವನದ ಪ್ರಕಟಣೆ ಹೇಳಿದೆ.

      ಅಮೆರಿಕದಲ್ಲಿ ಜನಿಸಿದ ಪ್ರತಿಯೊಂದು ಮಗುವಿಗೂ ಅಮೆರಿಕದ ಪೌರತ್ವ ಸಿಗುತ್ತದೆ. ಹೀಗಾಗಿ ಗರ್ಭಿಣಿಯರು ಮಕ್ಕಳಿಗೆ ಪೌರತ್ವ ಸಿಗಲೆಂದು ‘ಬರ್ತ್ ಟೂರಿಸಂ’ ಕೈಗೊಳ್ಳುತ್ತಾರೆ ಎನ್ನುವ ಆರೋಪ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇಲ್ಲಿಯವರೆಗೆ ಯಾವುದೇ ಸರ್ಕಾರ ಈ ವಿಷಯದ ಕಡೆ ಗಮನ ಹರಿಸಿರಲಿಲ್ಲ. ಆದರೆ ಈಗ ಟ್ರಂಪ್ ಸರ್ಕಾರ ಬಹಳ ಚರ್ಚೆಗೆ ಗ್ರಾಸವಾಗಬಲ್ಲ ವಿಚಾರಕ್ಕೆ ಕೈ ಹಾಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link