ಪಶುವೈದ್ಯೆ ಅತ್ಯಾಚಾರ : ಪ್ರಕರಣ ತನಿಖೆಗೆ ಎಸ್ಐಟಿ ರಚನೆ!!

ಹೈದರಾಬಾದ್:

      ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನು ಕಳೆದ ವಾರ ಪೋಲೀಸರು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿರುವ ಸಂಬಂಧ ತನಿಖೆ ನಡೆಸಲು ತೆಲಂಗಾಣ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

      ಈ ನಿಟ್ಟಿನಲ್ಲಿ ಭಾನುವಾರ ಸರ್ಕಾರದ ಆದೇಶ ಹೊರಡಿಸಿದ್ದು,”ನಾಲ್ವರ ಸಾವಿಗೆ ಕಾರಣವಾದ ಎನ್ ಕೌಂಟರ್ ನ ಹಿಂದಿನ ಕಾರಣಗಳು, ಸನ್ನಿವೇಶಗಳನ್ನು ಕಂಡುಹಿಡಿಯಬೇಕು ಮತ್ತು ಸತ್ಯವನ್ನು ಮರುಸ್ಥಾಪಿಸಬೇಕು ಎಂಬ ಅಂಶದ ದೃಷ್ಟಿಯಿಂದ, ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

      ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್.ಎಂ ಭಾಗವತ್ ನೇತೃತ್ವದ ಎಂಟು ಸದಸ್ಯರ ಎಸ್‌ಐಟಿ ತಂಡ, ಎನ್’ಕೌಂಟರ್ ಪ್ರಕರಣದಲ್ಲಿ ಈ ಹಿಂದೆ ದಾಖಲಾಗಿರುವ ಮತ್ತು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ ದಾಖಲಾದ ಇತರ ಎಲ್ಲಾ ಸಂಬಂಧಿತ ಪ್ರಕರಣಗಳ ತನಿಖೆಯನ್ನು ತಕ್ಷಣವೇ ವಹಿಸಿಕೊಳ್ಳಬೇಕು. ಎಸ್‌ಐಟಿ ತನಿಖೆಯನ್ನು ಪೂರ್ಣಗೊಳಿಸಬೇಕು ಮತ್ತು ವರದಿಯನ್ನು ಸಮರ್ಥ ನ್ಯಾಯಾಲಯದ ಮುಂದೆ ಸಲ್ಲಿಸಬೇಕು ಎಂದೂ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link