ಬೆಂಗಳೂರು : ಬಯಲಿಗೆ ಬಂತು ದೂಡ್ಡ ಹಗರಣ ;ಶಾಮೀಲಾಗಿದ್ದಾರೆ ಪ್ರಮುಖ ಕಾಂಗ್ರೆಸ್ ನಾಯಕರು?

ಬೆಂಗಳೂರು :

     ನಗರದಲ್ಲಿ  ಬೃಹತ್ ಹಗರಣ ಬಯಲಿಗೆ ಬಂದಿದೆ. ವೈಟ್ ಟ್ಯಾಪಿಂಗ್  ಕಾಮಗಾರಿಯಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪ್ರಮುಖ ಕಾಂಗ್ರೆಸ್​ ನಾಯಕರ ಹೆಸರುಗಳು ಕೇಳಿ ಬಂದಿವೆ.  ವೈಟ್​ ಟ್ಯಾಪಿಂಗ್​ನಲ್ಲಿ ಅಕ್ರಮ​ ನಡೆದಿರುವ ಬಗ್ಗೆ 2017ರಲ್ಲಿ ಬಿಜೆಪಿ ಮುಖಂಡ ಎನ್ಆರ್ ರಮೇಶ್ ತನಿಖಾ ಸಂಸ್ಥೆಗೆ ದೂರು ನೀಡಿದ್ದರು. ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ ಹಾಗೂ ಎಸಿಎಂಎಂ ಕೋರ್ಟ್​​ನಲ್ಲಿ ಅವರು ಖಾಸಗಿ ದೂರು ದಾಖಲಿಸಿದ್ದರು.

    ವೈಟ್​ ಟ್ಯಾಪಿಂಗ್​ ಮಾಡಲು ಪ್ರತಿ ಕಿಲೋ ಮೀಟರ್​ಗೆ ತಗಲುವ ವೆಚ್ಚ 3 ಕೋಟಿ ರೂಪಾಯಿ. ಆದರೆ, ಪ್ರತಿ ಕಿ.ಮೀಗೆ 11 ಕೋಟಿ ಬಿಲ್ ಮಾಡಲಾಗಿದೆ ಎಂಬುದು ರಮೇಶ್​ ಆರೋಪ. ಅಲ್ಲದೆ ಈ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕರಾದ  ಕೆ.ಜೆ.ಜಾರ್ಜ್ ಹಾಗೂ ಜಿ. ಪರಮೇಶ್ವರ್​  ದೊಡ್ಡ ಮೊತ್ತದಲ್ಲಿ ಹಣ ಪಡೆದಿದ್ದಾರೆ   ಎಂದು ಅವರು ಆರೋಪಿಸಿದ್ದಾರೆ.

  ಅಲ್ಲದೆ, ಒಂದು ಹಾಗೂ ಎರಡನೇ ಹಂತದ ಕಾಮಗಾರಿ ತನಿಖೆಗೆ ಆದೇಶಿಸಿರುವ ಬಿಎಸ್​ವೈ ಆದೇಶಿಸಿದ್ದಾರೆ.  ಎಂದು ತಿಳಿದುಬಂದಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap