ಜೊಮ್ಯಾಟೊ, ಸ್ವಿಗ್ಗಿ ವಿರುದ್ಧ ಗರಂ ; ನೋಟಿಸ್ ನೀಡಿದ ಗೂಗಲ್‌!!

ನವದೆಹಲಿ : 

      ಕೂಪನ್ ಕೋಡ್ ಮತ್ತು ಆಫರ್, ವೋಚರ್ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವ ಸ್ವಿಗ್ಗಿ ಮತ್ತು ಜೊಮ್ಯಾಟೋ ಕಂಪೆನಿಗಳ ವಿರುದ್ಧ ಗೂಗಲ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ.

     ಕೂತಲ್ಲಿಯೇ ಆಹಾರ ತರಿಸಿಕೊಂಡು ತಿನ್ನುವ ಚಟವುಳ್ಳವರಿಗೆ ಅನುಕೂಲ ಕಲ್ಪಿಸುತ್ತಿರುವ ಈ ಕಂಪೆನಿಗಳಿಗೆ ಆಫರ್​ ನೀಡುವುದು, ಗಿಫ್ಟ್​ ವೋಚರ್​ ನೀಡುವ ಮೂಲಕ ಗ್ರಾಹಕರಿಗೆ ಮಂಕುಬೂದಿ ಎರೆಚುವ ಕೆಲಸವನ್ನು ಮಾಡಬೇಡಿ ಎಂದು ಈಗಾಗಲೇ ಅನೇಕ ಆಯಪ್ ಆಧಾರಿತ ಕಂಪೆನಿ​ಗಳಿಗೆ ಗೂಗಲ್​ ಹೇಳಿದೆ.

    ಅದೇ ರೀತಿ ಈ ಎರಡು ಆಹಾರ ಸಂಸ್ಥೆಗಳಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.  ಆದರೆ ಇವುಗಳನ್ನು ಮೀರಿ ಕೂಪನ್ ಕೋಡ್, ಆಫರ್, ಗಿಫ್ಟ್​ ವೋಚರ್ ನೀಡುವ ಮೂಲಕ ಸ್ವಿಗ್ಗಿ ಮತ್ತು ಜೊಮಾಟೊ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ ಎನ್ನುವುದು ಗೂಗಲ್​ ಸಂಸ್ಥೆ ಆರೋಪ.

     ಈ ಹಿನ್ನೆಲೆಯಲ್ಲಿ ಈ ಎರಡೂ ಕಂಪೆನಿಗಳಿಗೆ ಗೂಗಲ್​ ನೋಟಿಸ್​ ಜಾರಿಗೊಳಿಸಿದೆ. ಇವೆರಡೂ ಆಯಪ್‌ ಆಧಾರಿತ ಕಂಪನಿಗಳು ತನ್ನ ಪ್ಲೇ ಸ್ಟೋರ್‌ನ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಗೂಗಲ್‌ ಆರೋಪಿಸಿದೆ.

     ಆದರೆ, ಈ ಆರೋಪವನ್ನು ಜೊಮಾಟೋ ನಿರಾಕರಿಸಿದ್ದು, ಗೂಗಲ್‌ ಪ್ಲೇಸ್ಟೋರ್‌ನ ನಿಯಮಗಳನ್ನು ತಾನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap