‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಗೆ ಆಯ್ಕೆಯಾದ ಪ್ರಧಾನಿ ಮೋದಿ

ನ್ಯೂಯಾರ್ಕ್:

      ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತ ಪ್ರಶಸ್ತಿಯಾದ ‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಗೆ ವಿಶ್ವಸಂಸ್ಥೆ ಆಯ್ಕೆ ಮಾಡಿದೆ.

      ಪರಿಸರ ಸ್ವಚ್ಛತೆಗೆ ಗಣನೀಯ ಸೇವೆ ಸಲ್ಲಿಸುವ ಮಹಾನ್‌ ವ್ಯಕ್ತಿಗಳಿಗೆ ಕೊಡಲಾಗುವ ‘ಅರ್ಥ್‌ ಅವಾರ್ಡ್‌ ಚಾಂಪಿಯನ್‌’ ಪ್ರಶಸ್ತಿಗೆ ವಿಶ್ವದ ಅತ್ಯುತ್ತಮ ಪರಿಸರ ಬದಲಾವಣೆದಾರರ ಪೈಕಿ ಆರು ಜನ ಸಾಧಕರನ್ನು ಗುರುತಿಸಲಾಗಿದೆ. ಮೋದಿ ಅವರ ಹೆಸರಿನೊಂದಿಗೆ, ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಲ್ ಮ್ಯಾಕ್ರೋನ್ ಅವರ ಹೆಸರನ್ನೂ ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

      ಪರಿಸರದ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಿರುವ ದಿಟ್ಟ, ನಾವೀನ್ಯ ಮತ್ತು ದಣಿವರಿಯದ ಪ್ರಯತ್ನಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿರುವವರನ್ನು ಈ ಪ್ರಶಸ್ತಿಗಳನ್ನು ನೀಡಲು ಈ ವರ್ಷ ಗುರುತಿಸಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

      ಸೌರಶಕ್ತಿ ಬಳಕೆ ಮತ್ತು ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ದೇಶಗಳು ಒತ್ತು ನೀಡುತ್ತಿರುವುದನ್ನು ಮನಗಂಡ ವಿಶ್ವಸಂಸ್ಥೆ ಈ ಪ್ರಶಸ್ತಿಗೆ ಮೋದಿ ಮತ್ತು ಮ್ಯಾರ್ಕೋನ್ ಅವರನ್ನು ಆರಿಸಿದೆ.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap