ನದಿಗೆ ಉರುಳಿದ ಮದುವೆ ಬಸ್‌ : 24 ಮಂದಿ ದುರ್ಮರಣ!!

 ರಾಜಸ್ಥಾನ: 

     ಚಾಲಕನ ಅಜಾಗರೂಕತೆಯಿಂದ ಬಸ್​ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ 24 ಮಂದಿ ಸಾವನ್ನಪ್ಪಿರುವ ದುರ್ಘಟನೆ  ರಾಜಸ್ಥಾನದ ಬೂಂದೀ ಜಿಲ್ಲೆಯ ಕೋಟಾ-ದೋಸಾ ಹೆದ್ದಾರಿಯಲ್ಲಿ ನಡೆದಿದೆ.

     ಬಸ್‌ ಕೋಟಾದಿಂದ ಸವಾಯಿಮಾಧೋಪುರ್‌ ಕಡೆಗೆ ಸಾಗುತ್ತಿತ್ತು. ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಬಸ್​ ನಿಯಂತ್ರಣ ತಪ್ಪಿ ಮೇಜ್​ ನದಿಗೆ ಬಿದ್ದಿದೆ. ಪರಿಣಾಮ 24 ಮಂದಿ ಸಾವನ್ನಪ್ಪಿದ್ದು, ಬಸ್‌ ನದಿಗೆ ಬಿದ್ದ ತಕ್ಷಣ ಸ್ಥಳೀಯ ಗ್ರಾಮಸ್ಥರು ನದಿಗೆ ಜಿಗಿದು ಹಲವರನ್ನು ರಕ್ಷಿಸಿದ್ದಾರೆ. 

     ಮದುವೆ ಸಮಾರಂಭ ಪ್ರಯುಕ್ತ ಸವಾಯಿ ಮಾಧಾಪುರಕ್ಕೆ ಹೋಗಿ ವಾಪಸ್​ ಬರುವಾಗ ಅಪಘಾತ ಸಂಭವಿಸಿದ್ದು, ಬಸ್‌ನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

      ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ತಂಡ ದೌಡಾಯಿಸಿದ್ದು, ನಾಲ್ವರನ್ನು ರಕ್ಷಿಸಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link