ಬೆಂಗಳೂರು:
ಯುಗಾದಿ ಹಬ್ಬದ ದಿನ ಶ್ರೀಶೈಲ್ ಮಲ್ಲಿಕಾರ್ಜುನನ ದರ್ಶನ ಪಡೆಯಲೆಂದು ಪಾದಯಾತ್ರೆಯಲ್ಲಿ ತೆರಳಿದ್ದ ಭಕ್ತರ ಮೇಲೆ ಲಾರಿ ಹರಿದು ಮೂವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕೋಡುಮುರು ಸಮೀಪದ ಗದ್ರಾಳು ಕ್ರಾಸ್ ಬಳಿ ಸಂಭವಿಸಿದೆ.
ಮೃತರನ್ನು ಬಳ್ಳಾರಿ ತಾಲೂಕಿನ ಹೊಸ ಯರಗುಡಿ ಗ್ರಾಮದ ಗಡ್ಡಂ ಹುಲುಗಯ್ಯ (29), ಜಿ.ಪೋತಲಿಂಗ (22) ಮತ್ತು ಜಿ.ಶೇಖಪ್ಪ (18) ಎಂದು ಗುರುತಿಸಲಾಗಿದ್ದು, ಇಂದು ನಸುಕಿನ ಜಾವ ಲಾರಿ ಹಾಯ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಮಲಗಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭಿಸಿದ ಇವರ ಮೇಲೆ ನಸುಕಿನ ಜಾವ 5 ಗಂಟೆ ಸುಮಾರಿಗೆ ಲಾರಿ ಹಾದುಹೋಗಿದೆ. ದುರ್ಘಟನೆಯಲ್ಲಿ ಪೋತಲಿಂಗ ಮತ್ತು ದೇವೇಂದ್ರ ರೆಡ್ಡಿ ಅವರ ಕಾಲುಗಳು ತುಂಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
