ಹೈದ್ರಾಬಾದ್
ನಗರದ ರಾಜೇಂದ್ರನಗರ್ ವ್ಯಾಪ್ತಿಯ ಅತ್ತಾಪೂರ್ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆ ಕೆಲ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಜನ ನೋಡುತ್ತಿದ್ದಂತೆಯೇ ಓರ್ವನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ನಡು ರಸ್ತೆಯಲ್ಲಿ ಸುಮಾರು ಜನ ನೋಡುತ್ತಿದ್ದರೂ, ಪೊಲೀಸರೂ ಅಲ್ಲೇ ಇದ್ರೂ ಕೊಡಲಿ, ಮತ್ತಿತರ ಮಾರಾಣಾಂತಿಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅತ್ತಾಪೂರ್ ಪಿಲ್ಲರ್ ನಂಬರ್ 138ರ ಬಳಿ ಇಬ್ಬರು ದುಷ್ಕರ್ಮಿಗಳು ಓರ್ವನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ ಸೇರಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿಯನ್ನು ರಮೇಶ್ ಎಂದು ಪತ್ತೆಹಚ್ಚಿದ್ದು, ಕಳೆದ ಆರು ತಿಂಗಳ ಹಿಂದೆ ಶಂಷಾಬಾದ್‍ನಲ್ಲಿನ ಮಹೇಶ್ ಎಂಬಾತನನ್ನು ಮೃತ ವ್ಯಕ್ಯಿ ಕೊಲೆ ಮಾಡಿದ್ದನು ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಬಂಧಿಯಾಗಿದ್ದ ರಮೇಶ್ ಬೇಲ್ ತೆಗೆದುಕೊಂಡು ಹೊರ ಬಂದಿದ್ದನು. ಇಂದು ಅದೇ ಪ್ರಕರಣದಲ್ಲಿ ಉಪ್ಪರಪಲ್ಲಿ ಕೋರ್ಟ್‍ಗೆ ಹಾಜರಾಗಿ ವಾಪಾಸ್ಸಾಗುವಾಗ ದುಷ್ಕರ್ಮಿಗಳು ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಮೃತ ವ್ಯಕ್ತಿ ರಮೇಶ್‍ನ ಪತ್ನಿಗೆ ಹಾಗೂ ಮಹೇಶ್ ಎಂಬಾತನಿಗೆ ಅನೈತಿಕ ಸಂಬಂಧವಿದ್ದ ಕಾರಣ ಆತನನ್ನು ಕೊಲೆ ಮಾಡಿದ್ದ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಮಹೇಶ್‍ನ ತಂದೆ ಮತ್ತು ಸಂಬಂಧಿಕರೊಬ್ಬರು ಇದೀಗ ರಮೇಶನನ್ನು ಹತ್ಯೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಪೊಲೀಸ್ ಪೆಟ್ರೋಲಿಂಗ್ ವ್ಯಾನ್ ಇದ್ದರೂ ಅದನ್ನು ಗಮನಿಸಿದರೂ ಕೂಡ ಭಯಬೀಳದೆ ಪೊಲೀಸರ ಎದುರಲ್ಲೇ ಕೊಲೆ ಮಾಡಿದ್ದಾರೆ. ಕೊಲೆ ಮಾಡುವರರನ್ನು ತಡೆಯಲು ಓರ್ವ ಪೊಲೀಸ್ ಪೇದೆ ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ.