ಶ್ರೀನಗರ:
ಲಷ್ಕರ್-ಎ-ತೊಯ್ಬಾ(ಎಲ್ಇಟಿ) ಸಂಘಟನೆಗೆ ಸೇರಿದ ಓರ್ವ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ನಿಸಾರ್ ದಾರ್ ಎಂದು ಗುರುತಿಸಲ್ಪಟ್ಟ ಭಯೋತ್ಪಾದಕ ಈ ಹಿಂದೆ ಗಂಡರ್ಬಲ್ ಜಿಲ್ಲೆಯ ಕುಲ್ಲನ್ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಿಂದ ತಪ್ಪಿಸಿಕೊಂಡಿದ್ದು, ಇದರಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಹತ್ಯೆಯಾಗಿದ್ದನೆಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಹುಸೇನ್ ಹೇಳಿದ್ದಾರೆ.
J&K: Lashkar-e-Toiba terrorist Nisar Dar who was arrested by security forces last night. He had earlier escaped from an encounter in Kullan Ganderbal in which one Pakistani terrorist was killed. https://t.co/H6n1UzRS2R pic.twitter.com/yM30jAoxo0
— ANI (@ANI) January 4, 2020
“ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ನಿಸಾರ್ ದಾರ್ ನನ್ನು ಕಾಶ್ಮೀರ ಪೋಲೀಸರು ಮತ್ತು ಭದ್ರತಾ ಪಡೆಗಳು ಬಂಧಿಸಿವೆ. ಈತ ಕುಲ್ಲನ್ ಗಂಡರ್ಬಾಲ್ನಲ್ಲಿ ನಡೆದ ಎನ್ಕೌಂಟರ್ನಿಂದ ತಪ್ಪಿಸಿಕೊಂಡಿದ್ದ. ಈಗ ಸೆರೆಯಾಗಿರುವ ಉಗ್ರ ಅನೇಕ ಉಗ್ರಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ಶಂಕಿಸಲಾಗಿದೆ.”
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ