ನರಗುಂದ:
ನರಗುಂದದ ಸರ್ ಎಂ. ವಿಶ್ವೇಶ್ವರಯ್ಯ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ವೈದೃತಿ ಕೋರಿಶೆಟ್ಟರ್ಗೆ ತಮಿಳುನಾಡಿನ ಯೂನಿವರ್ಸಲ್ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
ಪ್ರಧಾನಮಂತ್ರಿ, ಮುಖ್ಯಮಂತ್ರಿ, ಶಾಸಕರು, ಸಚಿವರು, ರಾಜ ಮಹಾರಾಜರ ಆಳ್ವಿಕೆ ಕಾಲ ಕುರಿತು ಕೇಳುಗರ ಪ್ರಶ್ನೆಗಳಿಗೆ ವೈದೃತಿ ಪಟಪಟನೆ ಉತ್ತರಿಸುತ್ತಾಳೆ. ವೈದೃತಿಯ ಅದ್ಭುತ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
(ಜ.25) ಸಂಜೆ 5 ಗಂಟೆಗೆ ಮಧುರೈನಲ್ಲಿ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ. ಇದಲ್ಲದೆ ಕರ್ನಾಟಕ ದರ್ಶನ ಮಾಸಪತ್ರಿಕೆ ಸೇವಾ ಅಭಿವೃದ್ಧಿ ಸಂಸ್ಥೆಯಿಂದ ಪ್ರತಿವರ್ಷ ನೀಡಲಾಗುವ ಕರ್ನಾಟಕ ಜ್ಞಾನ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿಗೂ ವೈದೃತಿ ಆಯ್ಕೆಯಾಗಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ