ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು: 25 ಮಂದಿ ಸಾವು

ಸಿಡ್ನಿ:

   ಆಸ್ಟ್ರೇಲಿಯಾದಲ್ಲಿ  ಕಾಳ್ಗಿಚ್ಚಿನಿಂದಾಗಿ 25 ಜನ ಸಾವನಪ್ಪಿದ್ದು, 2,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಇದು ಇಲ್ಲಿಯವರೆಗೆ ಯುಎಸ್ ರಾಜ್ಯವಾದ ಮೇರಿಲ್ಯಾಂಡ್‌ಗಿಂತ ಎರಡು ಪಟ್ಟು ಹೆಚ್ಚು ಪ್ರದೇಶವನ್ನು ಸುಟ್ಟುಹಾಕಿದೆ.

  ಕಾಳ್ಗಿಚ್ಚಿನಿಂದಾಗಿ ಕೋಲಾಗಳು ಮತ್ತು ಕಾಂಗರೂಗಳು ಸಾವನ್ನಪ್ಪಿವೆ. ಜೊತೆಗೆ ಅಲ್ಲಿನ ನಿವಾಸಿಗಳು ಹಾಗೂ ಪ್ರವಾಸಿಗರನ್ನು ಕಡಲತೀರದ ಪ್ರದೇಶಗಳಲ್ಲಿ ಆಶ್ರಯಿಸಲು ವ್ಯವಸ್ಥೆ ಮಾಡಲಾಗಿದೆ. ನ್ಯೂ ಸೌತ್ ವೇಲ್ಸ್‌ನಾದ್ಯಂತ 135 ಕ್ಕೂ ಹೆಚ್ಚು ಭಾಗಗಳಲ್ಲಿ ಇನ್ನೂ ಬೆಂಕಿ ಇನ್ನೂ ಉರಿಯುತ್ತಿದ್ದು, ಹಲವು ಸಮಸ್ಯೆಗಳಿಗೆ ಆಹ್ವಾನ ನೀಡಿದೆ.

ನ್ಯೂ ಸೌತ್ ವೇಲ್ಸ್‌ನಾದ್ಯಂತ 135 ಕ್ಕೂ ಹೆಚ್ಚು ಭಾಗಗಳಲ್ಲಿ ಬೆಂಕಿ ಇನ್ನೂ ಹೊತ್ತಿ ಉರಿಯುತ್ತಿದೆ. ಇನ್ನು ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿ ಸೋಮವಾರದಂದು ಕೆಟ್ಟ ಗಾಳಿಯ ಪ್ರಮಾಣ ಜಾಸ್ತಿ ಆಗಿತ್ತು. ನಗರವನ್ನು ದಟ್ಟ ಹೊಗೆ ಉಸಿರುಗಟ್ಟಿಸುವುದರಿಂದ ಮನೆಯಲ್ಲಿಯೇ ಇರಬೇಕೆಂದು ವಿಪತ್ತುಗಳಿಗೆ ದೇಶದ ಪ್ರತಿಕ್ರಿಯೆಯನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಗೃಹ ವ್ಯವಹಾರಗಳ ಇಲಾಖೆ ಸೂಚಿಸಿದೆ.

Recent Articles

spot_img

Related Stories

Share via
Copy link
Powered by Social Snap