ಬೆಂಗಳೂರು :
ಹೊಸ ಸಿನಿಮಾಕ್ಕೆ ತಂಗಿ ಪಾತ್ರ ಮಾಡಲು ನಟಿ ಬೇಕಾಗಿದ್ದಾಳೆ. ಅದಕ್ಕಾಗಿ ಆಡಿಶನ್ ಇದೆ ಎಂದು ನಂಬಿಸಿ ಕರೆದು ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರೈನ್ ಬೋ ಡ್ಯಾನ್ಸ್ ಶಾಲೆಯ ಪವನ್ ಮಾಸ್ಟರ್ ಬಂಧಿತ ಆರೋಪಿ.
ಆರೋಪಿಗೆ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯು ಡ್ಯಾನ್ಸ್ ಕಲಿಯಲು ಹೋಗಿದ್ದಾಗ ಪರಿಚಯವಾಗಿತ್ತು. ಈತ ಕನ್ನಡದ ರಿಯಾಲಿಟಿ ಶೋಗಳಾದ ಡಾನ್ಸ್ ಡಾನ್ಸ್, ತಕಧಿಮಿತ, ಕಿಕ್, ಡಾನ್ಸಿಂಗ್ ಸ್ಟಾರ್, ಮತ್ತು ಡಾನ್ಸ್ ಕರ್ನಾಟಕ ಡಾನ್ಸ್, ಶೋಗಳಲ್ಲಿ ಕೊರಿಯೋಗ್ರಫರ್ ಆಗಿದ್ದ ಪವನ್ ನನ್ನ ಪೊಲೀಸರು ಬಂಧಿಸಿದ್ದಾರೆ.
ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಡಾನ್ಸ್ ಕ್ಲಾಸ್ ನಡೆಸುತ್ತಿದ್ದ ಪವನ್, ಕಳೆದ ಜನವರಿ 12 ರಂದು ಯುವತಿಗೆ ಪವನ್ ಫೋನ್ ಮಾಡಿದ್ದನು. ಆಗ ಸ್ಟಾರ್ ನಟರೊಬ್ಬರ ಹೊಸ ಸಿನಿಮಾಗೆ ತಂಗಿ ಪಾತ್ರದ ಆಡಿಶನ್ ಇದೆ ಎಂದು ಹೇಳಿ ತನ್ನ ಡ್ಯಾನ್ಸ್ ಕ್ಲಾಸಿಗೆ ಯುವತಿಯನ್ನು ಕರೆಸಿಕೊಂಡಿದ್ದನು.
ನಂತರ ಆತನ ಗೆಳೆಯನೊಬ್ಬನಿಗೆ ಕರೆ ಮಾಡಿ ನಿರ್ದೇಶಕನ ಸೋಗಿನಲ್ಲಿ ಯುವತಿಯ ಜತೆ ಮಾತನಾಡಿಸಿರೋ ಪವನ್, ನಂತರ ನೀನು ಸುದೀಪ್ ಸರ್ ಮುಂದಿನ ಚಿತ್ರಕ್ಕೆ ತಂಗಿ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದೀಯ ಅಂತ ನಂಬಿಸಿದ್ದಾನೆ.
ನಂತರ ಮತ್ತು ಬರುವ ಔಷಧಿಯನ್ನು ನೀರಿನಲ್ಲಿ ಬೆರೆಸಿ ಯುವತಿಗೆ ಕುಡಿಸಿದ್ದಾನೆ. ಈ ವೇಳೆ ಡ್ಯಾನ್ಸ್ ಕ್ಲಾಸ್‍ನಲ್ಲಿ ಯುವತಿಗೆ ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋಗಳನ್ನ ತೋರಿಸಿದ್ದಾನೆ. ನೀರು ಕುಡಿದ ಬಳಿಕ ಯುವತಿ ಪ್ರಜ್ಞೆ ತಪ್ಪಿದ್ದಾಗ ಆರೋಪಿ ಪವನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ಥೆ ಪಾಲಕರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ