ಕೊರೋನಾ ಭೀತಿ ಹಿನ್ನೆಲೆ ಮದುವೆ ಪೋಸ್ಟ್‌ಪೋನ್ : ಮಂಗಳೂರು

ಮಂಗಳೂರು: 

     ಕೊರೋನಾ ವೈರೆಸ್ ಎಫೆಕ್ಟ್‌ನಿಂದ ಮದುವೆ ಪೋಸ್ಟ್‌ಪೋನ್ ಆಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಲ್ಲದೇ, ಮಧುಮಗ ಭಾರತಕ್ಕೆ ಬರದೇ ಸಮುದ್ರ ಮಧ್ಯದಲ್ಲೇ ಸಿಲುಕಿದಂತಾಗಿದೆ.

     ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಂಪಲದ ಯುವಕ ಸ್ಟಾರ್‌ ಕ್ರೂಝ್‌ನಲ್ಲಿ ಕೆಲಸ ಮಾಡುತ್ತಿದ್ದು, ಈ ಕ್ರೂಝ್ ಹಾಂಕಾಂಗ್, ಸಿಂಗಪುರ, ಥೈವಾನ್ ನಡುವೆ ಸಂಚರಿಸುತ್ತದೆ. ಈ ಹಡಗಿನಲ್ಲಿ ಸುಮಾರು 1,700 ಜನ ಪ್ರಯಾಣಿಕರಿದ್ದರು. ಇದರಲ್ಲಿ ಕೆಲವರಿಗೆ ಕೊರೋನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿರುವ ಪರಿಣಾಮ ಕ್ರೂಝನ್ನು ದಡಕ್ಕೆ ಕೊಂಡೊಯ್ಯಲು ಅವಕಾಶ ನೀಡಲಾಗುತ್ತಿಲ್ಲ. ಹಾಗಾಗಿ ಕ್ರೂಝನ್ನು ಸಮುದ್ರದ ಮಧ್ಯೆ ಸಿಲುಕಿದಂತಾಗಿದೆ.

   ಹೀಗಾಗಿ ಗೌರವ್ ಹಾಂಕಾಂಗ್‌ನ ಸಮುದ್ರ ಮಧ್ಯೆಯಲ್ಲಿ ಸಿಲುಕಿದ್ದಾನೆ. ಇದೇ ಸೋಮವಾರ ನಡೆಯಬೇಕಿದ್ದ ಮದುವೆಗೆ ಫೆ.4ನೇ ತಾರೀಖಿನಂದು ಗೌರವ್ ಊರಿಗೆ ಆಗಮಿಸಬೇಕಿತ್ತು. ಆದ್ರೆ ಕೊರೋನಾ ವೈರಸ್ ಭೀತಿಯಿಂದ ಮದುವೆ ಪೋಸ್ಟ್‌ಪೋನ್ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap