ಮಂಗಳೂರು :
ಆಂಧ್ರಪ್ರದೇಶದ ಬಸ್ ಒಂದಕ್ಕೆ ಬಂಟ್ವಾಳ ಬಳಿಯ ಫರಂಗಿಪೇಟೆಯಲ್ಲಿ ಕಲ್ಲು ತೂರಾಟ ನಡೆಸಿದ ಘಟನೆ ಗುರುವಾರ ಬೆಳ್ಳಗೆ ನಡೆದಿದೆ.
ಕರ್ನಾಟಕ ಬಂದ್ ಕರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ. ಬಸ್ ಓಡಾಟ, ಜನಜೀವನ ಸಹಜಸ್ಥಿತಿಯಲ್ಲಿದೆ. ಆದ್ರೆ ಫರಂಗಿಪೇಟೆಯಲ್ಲಿ ಮಾತ್ರ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ತಿರುಪತಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಇಂದು ಬೆಳ್ಳಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಬಸ್ಸಿನ ಕಿಟಕಿಯ ಗ್ಲಾಸ್ ಪುಎಇಯಾಗಿದೆ. ಬಸ್‌ನಲ್ಲಿ 36 ಮಂದಿ ಪ್ರಯಾಣಿಸುತ್ತಿದ್ದು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ