ವಿದ್ಯುತ್ ಕಡಿತ ಮಾಡಿ ಕಚೇರಿ ದೋಚಿದ ಕಳ್ಳರು

ಬೆಂಗಳೂರು :

   ವಿದ್ಯುತ್ ಕಡಿತ ಮಾಡಿ ಆಡಿಟರ್ ಕಚೇರಿಯಿಂದ ಕಳ್ಳರು ಲಕ್ಷ ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಸಿಟಿ ಮಾರ್ಕೆಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ‌.

ಇದೇ ತಿಂಗಳು 13ರಂದು ಮಧ್ಯರಾತ್ರಿ ಹೆಲ್ಮೆಟ್ ಧರಿಸಿ ಬಂದ ಖದೀಮರು ಕಟ್ಟಿಂಗ್ ಪ್ಲೇಯರ್​ನಲ್ಲಿ ಸಿಸಿಟಿವಿಯ ವೈರ್ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ.  ಸುಮಾರು 13 ಲಕ್ಷ ನಗದು, ಮೂರು ಲ್ಯಾಪ್​​ಟಾಪ್ ಹಾಗೂ ಎರಡು ಮೊಬೈಲ್​ಗಳನ್ನು‌ ಕಳವು ಮಾಡಿದ್ದ ಕಳ್ಳರ ಕೈಚಳಕ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

  ಘಟನೆ ನಡೆದು ನಾಲ್ಕು ದಿನ ಕಳೆದಿದ್ದು, ಆಡಿಟರ್ ಕಚೇರಿ ಮಾಲೀಕರು ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link