ತುಮಕೂರು:
ಪ್ರಸಕ್ತ ಸಾಲಿನ ಡಿ.ದೇವರಾಜು ಅರಸ್ ಪ್ರಶಸ್ತಿಗೆ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಆಯ್ಕೆಯಾಗಿದ್ದಾರೆ. ಸಮಾಜವಾದಿ ಸಿದ್ಧಾಂತಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಉಳುವವನೇ ಭೂಮಿಯ ಒಡೆಯ ಎನ್ನುವ ಭೂ ಹೋರಾಟದ ಮೂಲಕವೇ ರಾಜಕೀಯ ಜೀವನ ಪ್ರವೇಶಿಸಿದವರು.
ದೇವರಾಜು ಅರಸು ಅವರ ಗರಡಿಯಲ್ಲಿಯೇ ಬೆಳೆದಿರುವ ಇವರು, ಭೂ ಸುಧಾರಣಾ ಕಾಯ್ದೆಯಷ್ಟೇ ಕ್ರಾಂತಿಕಾರಿಯಾದ ವಾಸಿಸುವವನನ್ನೇ ಮನೆಯ ಒಡೆಯನನ್ನಾಗಿ ಮಾಡುವ ಕ್ರಾಂತಿಕಾರಿ ಕಾಯ್ದೆಯ ರೂವಾರಿಗಳಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟ್ವೀಟ್ ಮೂಲಕ ಬಣ್ಣಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ