ಮುಂಬೈ :
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯೂ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಹೀಗಿರುವಾಗಲೇ ನಿರ್ದೇಶಕ ಆಕಾಶ್ದೀಪ್ ಸಬೀರ್ ಹಾಗೂ ಅವರ ಪತ್ನಿ ಶೀಬಾ ಅವರು ಇತ್ತೀಚೆಗೆ ಸಂದರ್ಶನ ನೀಡಿದಿದ್ದು, ಕರೀನಾ ಬಗ್ಗೆ ಟೀಕೆ ಮಾಡಿದ್ದಾರೆ. ‘ಮನೆಗೆ ವಾಚ್ಮನ ಇಟ್ಟುಕೊಳ್ಳಲು ಪಾಪ ಹಣ ಇಲ್ಲ’ ಎಂದು ಟೀಕಿಸಿದ್ದಾರೆ.
‘ಕರೀನಾ ಮನೆಯಲ್ಲಿ ಭದ್ರತಾ ಸಿಬ್ಬಂದಿ ಏಕಿಲ್ಲ ಎಂಬುದು ನನ್ನ ಪ್ರಶ್ನೆ. ಮನೆಯಲ್ಲಿ 30 ಸಿಸಿಟಿವಿ ಇರಬಹುದು. ಆದರೆ, ಅವುಗಳು ಕಳ್ಳನನ್ನು ತಡೆದು ನಿಲ್ಲಿಸುತ್ತವೆಯೇ? ನಡೆದ ಅಪರಾಧವನ್ನು ಪತ್ತೆಹಚ್ಚಲು ಮಾತ್ರ ಅದು ಸಹಕಾರಿ ಆಗುತ್ತದೆಯೇ ಹೊರತು, ಅಪರಾಧ ನಡೆಯದಂತೆ ಸಿಸಿಟಿವಿ ತಡೆಯುವುದಿಲ್ಲ. ಕರೀನಾ ದಂಪತಿ ಯಾಕೆ ಫುಲ್ ಟೈಮ್ ಡ್ರೈವರ್ನ ತಮ್ಮ ಬಳಿ ಇರಿಸಿಕೊಂಡಿಲ್ಲ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸದ್ಯ ಆಕಾಶ್ದೀಪ್ ನೀಡಿದ ಹೇಳಿಕ ಚರ್ಚೆ ಆಗುತ್ತಿದೆ. ಅವರು ಕರೀನಾ ಅವರನ್ನು ಸರಿಯಾಗಿ ಪ್ರಶ್ನಿಸಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
