ಮುಂಬೈ:
ಇತ್ತೀಚೆಗೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡುವ ವಿಡಿಯೋ ವೈರಲ್ ಆಗಿತ್ತು. ಆದರೆ ನಟನ ವಿಡಿಯೋವನ್ನು ಮಾರ್ಫ್ ಮಾಡಲಾಗಿದೆ. ಮಾರ್ಫ್ ಮಾಡಲಾಗಿರುವ ವಿಡಿಯೋದಲ್ಲಿ ಸತ್ಯ ಪ್ರೇಮ್ ಕಿ ಕಥಾ ಸಿನಿಮಾದ ಹೀರೋ ಕಾರ್ತಿಕ್ ಆರ್ಯನ್ ಅವರನ್ನು ಕಾಣಬಹುದು. ವೈರಲ್ ಆಗಿದ್ದ ವಿಡಿಯೋದಲ್ಲಿ ನಟ ಕಾಂಗ್ರೆಸ್ ಪರ ಪ್ರಚಾರ ಮಾಡುವುದನ್ನು ಕಾಣಬಹುದು.
ಮುಂಬರುವ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟ ಕಮಲ್ ನಾಥ್ ಪರ ಪ್ರಚಾರ ಮಾಡುವುದು ಕಂಡುಬಂತು. ಆದರೆ ಈ ವಿಡಿಯೋ ಒಂದು ತಿಂಗಳು ಹಳೆಯದು. ಡಿಸ್ನಿ+ಹಾಟ್ಸ್ಟಾರ್ ಈ ವಿಡಿಯೋವನ್ನು ಮಾಡಿತ್ತು. ಐಸಿಸಿ ಮೆನ್ಸ್ ಕ್ರಿಕೆಟ್ ವರ್ಲ್ಡ್ ಕಪ್ 2023 ಅಭಿಯಾನಕ್ಕೆ ಈ ವಿಡಿಯೋ ಮಾಡಲಾಗಿತ್ತು.
ನಟ ಇದು ಫೇಕ್ ವಿಡಿಯೋ ಎಂದು ಎಡಿಟ್ ಆಗಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗೆಯೇ ಟ್ವಿಟರ್ನಲ್ಲಿ ರಿಯಲ್ ವಿಡಿಯೋ ಶೇರ್ ಮಾಡಿದ್ದಾರೆ. ಇದು ನಿಜವಾದ ಜಾಹೀರಾತು. ಉಳಿದ್ದೆಲ್ಲ ಫೇಕ್ ಎಂದಿದ್ದಾರೆ.
ನಟ ಸದ್ಯ ಚಂದು ಚಾಂಪಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಕಬೀರ್ ಖಾನ್ ಡೈರೆಕ್ಟ್ ಮಾಡಿದ್ದಾರೆ. ಸಿನಿಮಾ ಮುಂದಿನ ವರ್ಷ ಜೂನ್ 14ಕ್ಕೆ ರಿಲಿಸ್ ಆಗಲಿದೆ. ಇದು ಕಾರ್ತಿಕ್ ಹಾಗೂ ಅಬೀರ್ ಅವರ ಮೊದಲ ಕೊಲಾಬರೇಷನ್. ಇದನ್ನು ಸಾಜಿದ್ ನಾಡಿವಾಲ್ ನಿರ್ಮಿಸುತ್ತಿದ್ದು ಸಿನಿಮಾ ಮುರಳೀಕಾಂತ್ ಪೆಟ್ಕರ್ ಜೀವನದ ಕುರಿತಾಗಿದೆ. 1965 ಇಂಡೋ ಪಾಕ್ ಯುದ್ಧದಲ್ಲಿ ಗಂಭೀರ ಗಾಯಗಳಿಂದ ತತ್ತರಿಸಿದ ಮರಳೀಕಾಂತ್ ಅವರ ಜೀವನ ಕಥೆ ಇದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ