ಗೋಡೆ ಹತ್ತಿದ ಜಮ್ಮು-ಕಾಶ್ಮೀರ ಸಿಎಂ…..!

ಶ್ರೀನಗರ: 

     ಪೊಲೀಸರು ಅನುಮತಿ ನಿರಾಕರಿಸಿದ ಬಳಿಕವೂ ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿರುವ  ಹುತಾತ್ಮರ ಸಮಾಧಿ ಸ್ಥಳಕ್ಕೆ  ಹೋಗಲು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ  ಒಮರ್ ಅಬ್ದುಲ್ಲಾ ಗೇಟ್ ಹತ್ತಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. 1931ರ ಜುಲೈ 13ರಂದು ಮಹಾರಾಜ ಹರಿ ಸಿಂಗ್ ಅವರ ಡೋಗ್ರಾ ಪಡೆಗಳ ಗುಂಡಿಗೆ ಬಲಿಯಾದ ಪ್ರತಿಭಟನಾಕಾರರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅವರು ಹುತಾತ್ಮರ ಸಮಾಧಿ ಇರುವ ಮಜರ್-ಎ-ಶುಹಾದ್ ನ ಬಂದ್‌ ಮಾಡಿರುವ ಗೇಟ್‌ ಅನ್ನು ಹಾರಿ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಒಮರ್‌ ಅಬ್ದುಲ್ಲಾ ಅವರ ಜೊತೆಗೆ ನ್ಯಾಷನಲ್‌ ಕಾನ್ಫರೆನ್ಸ್‌ನ ಇತರ ನಾಯಕರು ಮತ್ತು ಕಾರ್ಯಕರ್ತರು ಕೂಡ ಗೇಟ್ ಹಾರಿ ಬಂದು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

    ಪೊಲೀಸರು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಒಮರ್ ಅವರನ್ನು ತಳ್ಳಿ ಹುತಾತ್ಮ ಸ್ಮಶಾನದೊಳಕ್ಕೆ ಪ್ರವೇಶಿಸಿದರು. ಇದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜುಲೈ 13ರಂದು ಪ್ರತಿಭಟನಾಕಾರರ ಹತ್ಯೆಯ ವಾರ್ಷಿಕೋತ್ಸವವನ್ನು ಆಚರಣೆಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಪೊಲೀಸರು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರನ್ನು ತಡೆಯಲು ಪ್ರಯತ್ನಿಸಿದರು.

   ಹುತಾತ್ಮರ ಸ್ಮಶಾನವು ಸ್ಮಶಾನವು ನಕ್ಷ್‌ಬಂದ್ ಸಾಹಿಬ್ ಮಸೀದಿ ಸಮೀಪದಲ್ಲಿದ್ದು, ಇಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್, ನಾನು ಫಾತಿಹಾವನ್ನು ಅರ್ಪಿಸಿದೆ. ಇಲ್ಲಿಗೆ ಜನರನ್ನು ನಿರ್ಬಂಧಿಸಲಾಗಿದೆ. ನಾನು ಒಳಗೆ ಹೋಗಬಾರದು ಎಂಬ ಕಾರಣಕ್ಕೆ, ಗೇಟ್‌ ಮುಂದೆ ತಾತ್ಕಾಲಿಕವಾಗಿ ಒಂದು ಬಂಕರ್‌ ಕೂಡ ನಿರ್ಮಿಸಲಾಗಿದೆ. ಆದರೆ ನಾವು ಎಲ್ಲಾ ಅಡೆತಡೆಗಳನ್ನು ದಾಟಿ ಒಳಗೆ ಬಂದಿದ್ದೇವೆ ಎಂದು ಹೇಳಿದರು.

   ಇಲ್ಲಿನ ಸರ್ಕಾರವು ನನ್ನನ್ನು ನಹಟ್ಟಾ ಚೌಕ್‌ನಿಂದ ನಡೆಯುವಂತೆ ಮಾಡಿತು. ನನ್ನ ದಾರಿಯನ್ನು ತಡೆಯಲು ಪ್ರಯತ್ನಿಸಿತು. ನಕ್ಷ್‌ಬಂದ್ ದೇಗುಲದ ದ್ವಾರವನ್ನು ತಡೆದು ಗೋಡೆ ಏರುವಂತೆ ಮಾಡಿತು. ತಮಗೆ ಪೊಲೀಸರು ತಡೆಯೊಡ್ಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸಮವಸ್ತ್ರದಲ್ಲಿರುವ ಈ ಪೊಲೀಸರುಕಾನೂನನ್ನು ಮರೆತುಬಿಡುತ್ತಾರೆ. ಅವರು ಇಂದು ಯಾವ ಕಾನೂನಿನ ಅಡಿಯಲ್ಲಿ ನಮ್ಮನ್ನು ತಡೆಯಲು ಪ್ರಯತ್ನಿಸಿದರು ಎಂದು ಪ್ರಶ್ನಿಸಿದ ಅವರು

   ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನಿಯಂತ್ರಣದಲ್ಲಿರುವ ಕಣಿವೆಯಲ್ಲಿನ ಭದ್ರತಾ ಪಡೆಗಳನ್ನು ತರಾಟೆಗೆ ತೆಗೆದುಕೊಂಡರು. ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡದಂತೆ ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ವಿರೋಧ ಪಕ್ಷದ ನಾಯಕರನ್ನು ಭಾನುವಾರವೇ ಗೃಹ ಬಂಧನದಲ್ಲಿ ಇರಿಸಲಾಗಿತ್ತು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಆರೋಪಿಸಿದೆ. ಹುತಾತ್ಮರ ದಿನಾಚರಣೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದ ಲೆಫ್ಟಿನೆಂಟ್ ಗವರ್ನರ್ ಆಡಳಿತವು, ಸಮಾಧಿ ಕಡೆಗೆ ಹೋದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. 

   ಶ್ರೀನಗರದಲ್ಲಿ 1931ರ ಜುಲೈ 13ರಂದು ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮಹಾರಾಜ ಹರಿ ಸಿಂಗ್ ಅವರ ಡೋಗ್ರಾ ಪಡೆಗಳು ಪ್ರತಿಭಟನಕಾರರತ್ತ ಗುಂಡು ಹಾರಿಸಿದ್ದರು. ಈ ಹತ್ಯಾಕಾಂಡವನ್ನು ಕಣಿವೆಯ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗುತ್ತದೆ. ಈ ಹೋರಾಟದಲ್ಲಿ ಮಡಿದವರಿಗಾಗಿ ಮಜರ್-ಎ-ಶುಹಾದ್ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಪ್ರತಿ ವರ್ಷ ಜುಲೈ 13ರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.

   2020ರಲ್ಲಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಆಡಳಿತವು ಕೇಂದ್ರಾಡಳಿತ ಪ್ರದೇಶದಲ್ಲಿ ಗೆಜೆಟೆಡ್ ರಜಾದಿನಗಳ ಪಟ್ಟಿಯಿಂದ ಹುತಾತ್ಮರ ದಿನವನ್ನು ತೆಗೆದುಹಾಕಿದೆ. ಇದು ಪ್ರಾದೇಶಿಕ ರಾಜಕೀಯ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.

Recent Articles

spot_img

Related Stories

Share via
Copy link