ವೇಲ್ಸ್‌ ರಾಜಕುಮಾರಿ‌ ಕೇಟ್‌ ಮಿಡ್ಲಟನ್‌ ಗೆ ಕ್ಯಾನ್ಸರ್…..!

ಬ್ರಿಟನ್:

   ಸೂರ್ಯ ಮುಳುಗದ ದೇಶ ಎಂದೇ ಹೇಳಲಾಗುವ ಬ್ರಿಟನ್‌ ನ  ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್  ಕ್ಯಾನ್ಸರ್‌ಗೆ   ಕಿಮೋಥೆರಪಿಗೆ ಒಳಗಾಗುತ್ತಿರುವುದಾಗಿ ತಿಳಿಸಿದ್ದಾರೆ. ವೀಡಿಯೊ ಸಂದೇಶದಲ್ಲಿ ಈ ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.

    ಕೇಟ್ ಮಿಡ್ಲ್ ಟನ್ ಈ ವರ್ಷದ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದು ಅವರ ಆರೋಗ್ಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು. ಜನವರಿಯಲ್ಲಿ, ಕೇಟ್ ಮಿಡಲ್ಟನ್ ಲಂಡನ್‌ನಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದನ್ನು ಆರಂಭದಲ್ಲಿ ಕ್ಯಾನ್ಸರ್ ಅಲ್ಲ ಎಂದು ಭಾವಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ನಂತರದ ವೈದ್ಯಕೀಯ ಪರೀಕ್ಷೆಗಳು ಕೇಟ್ ಮಿಡಲ್ಟನ್ ಕ್ಯಾನ್ಸರ್​ನಿಂದ ಬಳಲುತ್ತಿರುವುದನ್ನು ದೃಢಪಡಿಸಿದ್ದವು.

   ನಮ್ಮ ಇಡೀ ಕುಟುಂಬಕ್ಕೆ ಕಳೆದ ಎರಡು ತಿಂಗಳು ಬಹಳಷ್ಟು ಕಷ್ಟಕರ ದಿನಗಳಾಗಿವೆ. ಆದರೆ ಅದ್ಭುತ ವೈದ್ಯಕೀಯ ತಂಡ ನನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಅದಕ್ಕಾಗಿ ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಹೊಟ್ಟೆಯ ಶಸ್ತ್ರ ಚಿಕಿತ್ಸೆ ಮಾಡಿದಾಗ ಕ್ಯಾನ್ಸರ್ ಪತ್ತೆಯಾಗಿರಲಿಲ್ಲ’ ಎಂದು ಹೇಳಿದ್ದಾರೆ

   ಕೆನ್ಸಿಂಗ್ಟನ್ ಪ್ಯಾಲೇಸ್ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ವೇಲ್ಸ್ ರಾಜಕುಮಾರಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಮಿಡಲ್ಟನ್​ಗೆ ಶಸ್ತ್ರಚಿಕಿತ್ಸೆಯ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಹಾಗಾಗಿ ವೈದ್ಯಕೀಯ ತಂಡವು ಕೀಮೋಥೆರಪಿಯ ಕೋರ್ಸ್ ನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿತ್ತು. ಈಗ ಆ ಚಿಕಿತ್ಸೆಯ ಆರಂಭಿಕ ಹಂತದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap