ಕವಿರತ್ನ ಕಾಳಿದಾಸ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ತುಮಕೂರು :-

     ಶ್ರೀ ಕವಿರತ್ನ ಕಾಳಿದಾಸ ಪುತ್ತಿನ ಸಹಕಾರ ಸಂಘ ನಿಯಮಿತ ತುಮಕೂರು ಬ್ಯಾಂಕಿಗೆ ನೂತನವಾಗಿ ಎಂ ಧರ್ಮರಾಜ್ ಅಧ್ಯಕ್ಷರಾಗಿ ಎಲ್ ಸುಶೀಲ ಉಪಾಧ್ಯಕ್ಷರಾಗಿ ನೂತನವಾಗಿ ಬುದುವಾರ ಆಯ್ಕೆಯಾಗಿದೆ.

     ತುಮಕೂರಿನ ಶ್ರೀ ಕವಿರತ್ನ ಕಾಳಿದಾಸ ಬ್ಯಾಂಕ್ ನಲ್ಲಿ ಬುಧವಾರ ಚುನಾವಣೆ ನಡೆದು ಈ ಹಿಂದಿನ ಅಧ್ಯಕ್ಷರಾಗಿದ್ದ ಎಂ ಧರ್ಮರಾಜ್ ಅವರೇ ಈ ಬಾರಿಯೂ ಮತ್ತೊಮ್ಮೆ ಭರ್ಜರಿಯಾಗಿ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಎಲ್ ಸುಶೀಲ ಆಯ್ಕೆಯಾಗಿದ್ದಾರೆ.

     ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ ಧರ್ಮರಾಜ್ ಮಾತನಾಡಿ ಬ್ಯಾಂಕಿಂಗ್ ವ್ಯವಸ್ಥೆ ಆರ್ಥಿಕವಾಗಿ ಸದೃಢಗೊಳ್ಳಬೇಕಾದರೆ ಪಾರದರ್ಶಕ ನೆಡೆ ಬಹಳ ಮುಖ್ಯವಾಗಿರುತ್ತದೆ ಅದೇ ಮಾದರಿಯಲ್ಲಿ ಶ್ರೀ ಕವಿರತ್ನ ಕಾಳಿದಾಸ ಬ್ಯಾಂಕ್ ಸದೃಢ ಗೊಳಿಸಲು ಬಹಳಷ್ಟು ನಿರ್ದೇಶಕರುಗಳು ಶ್ರಮವಹಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕನ್ನು ಆರ್ಥಿಕವಾಗಿ ಸದೃಢಗೊಳಿಸಲು ತೂಂಕಕಟ್ಟಿ ಕಾರ್ಯಾನಿರ್ವಹಿಸುವುದಾಗಿ ತಿಳಿಸಿದರಲ್ಲದೆ ಅಭಿವೃದ್ಧಿ ದೃಷ್ಟಿಕೋನವನ್ನು ಇಟ್ಟುಕೊಂಡು ಬೆಂಬಲಿಸಿದ ಎಲ್ಲಾ ನಿರ್ದೇಶಕರುಗಳ ಆಶಯಕ್ಕೆ ಸ್ಪಂದಿಸಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ದುಡಿಯುವುದಾಗಿ ಅಭಿಪ್ರಾಯಪಟ್ಟರು.

     ಉಪಾಧ್ಯಕ್ಷರಾಗಿ ಆಯ್ಕೆಯಾದ ಎಲ್ .ಸುಶೀಲ ಮಾತನಾಡಿ ಅಭಿವೃದ್ಧಿ ದೃಷ್ಟಿಯಿಂದ ನಮ್ಮನ್ನ ಬೆಂಬಲಿಸಿದ ಎಲ್ಲಾ ನಿರ್ದೇಶಕರುಗಳಿಗೂ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಭಿನಂದನೆ ಸಲ್ಲಿಸಿದರು.

Recent Articles

spot_img

Related Stories

Share via
Copy link