ಏಪ್ರಿಲ್‌ ನಿಂದ ಕೇದಾರನಾಥ ದೇವಾಲಯ ಓಪನ್..!

ಡೆಹ್ರಾಡೂನ್:

     ಚಾರ್ ಧಾಮ್ ಯಾತ್ರೆಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಬಾಗಿಲು ಸುಮಾರು ಆರು ತಿಂಗಳ ನಂತರ ಬಾಗಿಲು ತೆರೆಯಲಿದೆ ಎಂದು ದೇವಸ್ತಾನ ಸಮಿತಿ ತಿಳಿಸಿದೆ.ಏಪ್ರಿಲ್ 25 ರಂದು ಬೆಳಗ್ಗೆ 6.20 ಕ್ಕೆ ಹಿಮಾಲಯ ದೇವಾಲಯವು  ದರ್ಶನಕ್ಕಾಗಿ ತೆರೆಯಲಾಗುವುದು ಎಂದು ಬದರಿನಾಥ್-ಕೇದಾರನಾಥ ಮಂದಿರ ಸಮಿತಿ  ಮೂಲಗಳು ತಿಳಿಸಿವೆ.

    ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಶನಿವಾರ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ದೇವಾಲಯದ ಬಾಗಿಲು ತೆರೆಯುವ ಸಮಯ ಮತ್ತು ದಿನಾಂಕವನ್ನು ಪ್ರಕಟಿಸಲಾಯಿತು .ಸಮಾರಂಭದಲ್ಲಿ ಬಿಕೆಟಿಸಿ ಅಧಿಕಾರಿಗಳು, ತೀರ್ಥಪುರೋಹಿತರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

    ಕೇದಾರನಾಥವನ್ನು ಬಂದ್ ಮಾಡಿದ ನಂತರ ಚಳಿಗಾಲದಲ್ಲಿ ಪೂಜಿಸುವ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ಶಿವನ ವಿಗ್ರಹವನ್ನು ಕೆಳಗೆ ತರಲಾಗುತ್ತದೆ.ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಈಗಾಗಲೇ ಏಪ್ರಿಲ್ 27 ಮತ್ತು ಏಪ್ರಿಲ್ 22 ರಂದು ತೆರೆಯಲು ನಿರ್ಧರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link