ಬಿಜೆಪಿ-ಕಾಂಗ್ರೆಸ್ ದೂರವಿಟ್ಟು ಎಎಪಿ ಬೆಂಬಲಿಸಿ

ತುಮಕೂರು 

    ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸೇರಿದಂತೆ ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕ ರಾಜ್ಯದ ಜನತೆ ದೂರ ಬಿಟ್ಟು ಎಎಪಿ ಪಕ್ಷವನ್ನು ಬೆಂಬಲಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಫರ್ ಮೋಹಿನುದ್ದೀನ್ ಕರೆ ನೀಡಿದ್ದಾರೆ.

   ಇಲ್ಲಿನ ಎಎಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷದ ಕೆಲಸ ಕಾರ್ಯಗಳ ಬಗ್ಗೆ ವಿದ್ಯಾವಂತರಿಗೆ ಬಹಳಷ್ಟು ತಿಳಿದಿದೆ. ಇದುವರೆಗೂ ಪ್ರಾದೇಶಿಕ ಪಕ್ಷವಾಗಿದ್ದ ನಮ್ಮ ಪಕ್ಷ ಇಂದು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಆಮ್‌ಆದ್ಮಿ ಪಕ್ಷ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆ ಮೂಲಕ ಬಡವರ ರಕ್ಷಣೆಗೆ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುವ ಯೋಜನೆ ಹೊಂದಿದೆ ಎಂದರು.

   ಇಂತಹ ಸಂದರ್ಭದಲ್ಲಿ ತುಮಕೂರಿನ ಸಮಾಜ ಸೇವಕ ಹಾಗೂ ಯುವ ಮುಖಂಡ ಅಜ್ಮಲ್‌ಪಾಷ ಪಕ್ಷಕ್ಕೆ ಸೇರ್ಪಡೆ ಆಗಿರುವುದು ಸಂತೋಷದ ಸಂಗತಿ. ಇಷ್ಟೊಂದು ಕಾರ್ಯಕರ್ತರ ಸಮ್ಮುಖದಲ್ಲಿ ಸೇರ್ಪಡೆ ಆಗಿರುವುದು ಪಕ್ಷಕ್ಕೆ ಬಲ ಬಂದಂತಾಗಿದೆ. ನಿಮ್ಮಂತಹ ನಿಷ್ಠಾವಂತ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ ಅಭ್ಯರ್ಥಿಯಾಗುವುದು ಒಳ್ಳೆಯ ನಡೆ ಎಂದ ಅವರು, ಟಿಕೆಟ್ ಸಂಬಂಧ ರಾಜ್ಯ ಕಮಿಟಿಯೊಂದಿಗೆ ಮಾತನಾಡಿ, ಈ ವಿಷಯದ ಬಗ್ಗೆ ಚರ್ಚೆ ಮಾಡಿ ಸದ್ಯದಲ್ಲೇ ತೀರ್ಮಾನ ತೆಗೆದುಕೊಂಡು ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

   ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖಂಡ ಸೈಯದ್ ಅಜ್ಮಲ್ ಪಾಷ ಎಎಪಿ ಪಕ್ಷವನ್ನು ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ತುಮಕೂರು ನಗರದ ಅಭ್ಯರ್ಥಿಯಾಗಿ ಸಯ್ಯದ್ ಅಜ್ಮಲ್ ಪಾಷ ರವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ನಗರದ ವಿವಿಧ ಮುಖಂಡರುಗಳು ಹಾಗೂ ಕಾರ್ಯಕರ್ತರು ಸೇರಿ ಸಭೆ ನಡೆಸಲಾಯಿತು.

   ಸೈಯದ್ ಅಜ್ಮಲ್ ಪಾಷ ಮಾತನಾಡಿ, ಜನರ ತೆರಿಗೆ ಜನರ ಸೇವೆಗೆ ಎಂದು ನಿಂತಿರುವ ಎಎಪಿ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಾನು ಅಭ್ಯರ್ಥಿಯಾದರೆ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಪಕ್ಷದ ಸಂಘಟನೆ ಮಾಡುತ್ತೇನೆ. ಜನರ ಮನೆ ಮನೆಗಳಿಗೆ ಹೋಗಿ ಪಕ್ಷದ ಕೆಲಸ ಕಾರ್ಯಗಳ ಬಗ್ಗೆ ತಿಳಿಸುತ್ತೇನೆ ಹಾಗೂ ಮುಂಬರುವ ಚುನಾವಣೆಯಲ್ಲಿ ನನ್ನ ಆಯ್ಕೆ ಮಾಡಿದ್ದೆ ಆದಲ್ಲಿ ನಿಮ್ಮ ಮನೆ ಮಗನಾಗಿ ಬಹಳ ಶ್ರದ್ಧೆ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತೇನೆ. ಹಾಗಾಗಿ ಕರ್ನಾಟಕ ರಾಜ್ಯದಲ್ಲೂ ಕೇಜ್ರಿವಾಲ್‌ರವರಿಗೆ ಒಂದು ಅವಕಾಶ ಕೊಡಿ. ಆ ಮೂಲಕ ಕರ್ನಾಟಕ ಬೇರೆ ರಾಜ್ಯಗಳಿಗೆ ಮಾದರಿ ರಾಜ್ಯವಾಗುತ್ತದೆ ಎಂದು ತಿಳಿಸಿದರು.

    ರೈತ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಗೌಡರು ಮಾತನಾಡಿ, ಆಮ್ ಆದ್ಮಿ ಪಕ್ಷದ ಸಾಧನೆ ಬಹಳಷ್ಟು ಇದೆ. ಇವರ ಕಾರ್ಯವೈಖರಿ ಬೇರೆ ಪಕ್ಷಗಳಿಗೆ ಮಾದರಿಯಾಗಬೇಕು. ಅಜ್ಮಲ್‌ಪಾಷ ನಾನು ಕಂಡAತೆ ಬಹಳ ಸರಳ ವ್ಯಕ್ತಿತ್ವ ಹಾಗೂ ಸಹೃದಯ ಮನಸುಳ್ಳ ವ್ಯಕ್ತಿ. ಮುಂಬರುವ ಚುನಾವಣೆಯಲ್ಲಿ ಇವರನ್ನು ಆಯ್ಕೆ ಮಾಡಿ ನಿಮ್ಮಗಳ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಬೇಕೆಂದು ಪಕ್ಷದ ಹಿರಿಯ ಮುಖಂಡರಲ್ಲಿ ಮನವಿ ಮಾಡಿದರು.

   ಆಮ್ ಆದ್ಮಿ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷ ಪ್ರೇಮ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ಕೆ. ಎಂ. ಮಹಮ್ಮದ್, ಸೈಯದ್ ಅಪ್ಸರ್, ಮಹಮ್ಮದ್ ಜಬಿವುಲ್ಲ, ನೆಲಮಂಗಲ ಬಾಬು, ಫಿಲಂ ಇನ್‌ಸ್ಟ್ಟಿಟ್ಯೂಟ್ ಆನಂದ್, ಸಚಿನ್, ಮಹಮ್ಮದ್ ನಯಾಜ್, ಅಶ್ರಫ್, ರಾಜಶೇಖರ್, ಸತೀಶ್ ಮೀಸೆ, ದಿವಾಕರ್ ಬೆಂಗಳೂರು, ನಾರಾಯಣ್, ಅಸ್ವಾಕ್ ಅಹಮದ್, ಅಂಜುಮ್ ಪಾಷಾ, ಶಾಬೇಜ್, ರೇಷ್ಮಾ, ಕುಸ್ತರ್ ಉನ್ನಿಸಾ ಮುಂತಾದ ಕಾರ್ಯಕರ್ತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap