ಬೆಂಗಳೂರು:
ವಿದ್ಯುತ್ ತಿದ್ದುಪಡಿ ನಿಯಗಳ 2023 ಪ್ರಕಾರ ದಿನದ ಸಮಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.
ಈ ಕುರಿತು ಆಯೋಗಕ್ಕೆ ಎಫ್‌ಕೆಸಿಸಿಐ ಪತ್ರ ಬರೆದಿದ್ದು, 10 ಕಿಲೋ ವಾಟ್ಸ್ ಗಿಂತ ಹೆಚ್ಚಿನ ಗರಿಷ್ಠ ಬೇಡಿಕೆಯನ್ನು ಹೊಂದಿರುವ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಟಿಒಡಿ (ದಿನದ ಸಮಯ ದರ ವ್ಯವಸ್ಥೆ) ಯೋಜನೆಯನ್ನ ಪರಿಚಯಿಸುವ ಪ್ರಾಮುಖ್ಯತೆಯನ್ನು ತಿಳಿಸಿರುತ್ತದೆ. ಇದು ಇಂಧನ ಬಳಕೆ ಮತ್ತು ದರವನ್ನು ಸಾಮಾನ್ಯ ದರದ 1.20 ಟ್ಟು ಕಡಿಮೆಯಿರಬಾರದು. ಇತರ ಗ್ರಾಹಕರಿಗೆ ಇದು ಸಾಮಾನ್ಯ ದರಕ್ಕಿಂದ 1.10 ಪಟ್ಟು ಕಡಿಮೆಯಿರಬಾರದೆಂದು ತಿಳಿಸಿದೆ.
ಮೀಟರಿಂಗ್ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಎಫ್‌ಕೆಸಿಸಿಐ ಸ್ಪಷ್ಟ ನಿರ್ದೇಶನಗಳನ್ನು ಕೋರಿ, ಸ್ಮಾರ್ಟ್ ಮೀಟರ್ ಗಳ ಅಳವಡಿಕೆಗೆ ಸಲಹೆ ನೀಡಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ವಿಳಂಬವಾದರೆ, ಟಿಒಡಿ ಯೋಜನೆ ಸಮಯೋಚಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಇಂಧನ ಬಳಕೆಯ ಮಾದರಿಗಳನ್ನು ಉತ್ತೇಜಿಸಲು ಅನ್ವಯವಾಗುವ ಗ್ರಾಹಕರಿಗೆ ಟಿಒಡಿ ಮೀಟರ್ ಗಳನ್ನು ಆಯ್ಕೆ ಮಾಡಲು ಆಯೋಗವು ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿದೆ.