ರಾಜ್ಯಪಾಲರ ಗೃಹ ಕಛೇರಿ ಮುಂದೆ ಸಿಎಂ ಧರಣಿ…!!!!

0
259
ಪಾಂಡಿಚೇರಿ:
      ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸಿಎಂ ಮತ್ತು ಎಲ್ ಜೆ ನಡುವಿನ ತಿಕ್ಕಾಟಕ್ಕೆ ಮುಕ್ತಿ ದೊರಕಿದ ಬೆನ್ನಲೆ ಮತ್ತೊಂದು ರಾಜ್ಯ ಅದೇ ಹಾದಿ ಹಿಡಿದಿದೆ . 
     ಅತ್ಯಂತ ಸುಂದರ ಪ್ರವಾಸಿತಾಣಗಳಿರುವ ರಾಜ್ಯ ಪುದುಚೇರಿ ರಾಜ್ಯಪಾಲರಾದ ಶ್ರೀ.ಕಿರಣ್ ಬೇಡಿ ಹಾಗು ಅಲ್ಲಿನ ಸಿಎಂ ನಾರಾಯಣ ಸ್ವಾಮಿ ನಡುವೆ ಸಣ್ಣದಾಗಿ ಕಿಡಿ ಹೊತ್ತಿಕೊಂಡಿದೆ. ಇಷ್ಟೂದಿನ ಭೂದಿ ಮುಚ್ಚಿದ ಕೆಂಡದಂತಿದ್ದ ವಿಷಯ ಒಮ್ಮೆಲೇ ಬೆಳಕಿಗೆ ಬಂದಿದ್ದು ಈ ವಿಚಾರವಾಗಿ ನಾರಾಯಣ ಸ್ವಾಮಿಯವರು ಹೇಳುವುದೇನೆಂದರೆ ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ , ಅಲ್ಲದೆ ಅವರ ನಿವಾಸದ ಎದುರು ಧರಣಿ ಕೂಡ ನಡೆಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
       ಸಿಎಂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜ್ಯಪಾಲರ ಗೃಹ ಕಚೇರಿ ರಾಜ್‌ ನಿವಾಸ್ ಬಳಿ ನಿನ್ನೆ ಮಧ್ಯಾಹ್ನ ದಿಂದ ರಾತ್ರಿಯಿಡೀ ಧರಣಿ ನಡೆಸಿದ್ದಾರೆ. ಧರಣಿ ಸ್ಥಳದಲ್ಲಿಯೇ ತಮ್ಮ ಕಛೇರಿ ಕೆಲಸಗಳನ್ನು ಕೂಡ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here