ಆ್ಯಪಲ್ ಸಿಎಫ್​ಒ ಸ್ಥಾನಕ್ಕೆ ಭಾರತ ಮೂಲದ ಕೇವನ್ ಪರೇಖ್ ನೇಮಕ….!

ಕ್ಯಾಲಿಫೋರ್ನಿಯಾ

    ವಿಶ್ವದ ಅತ್ಯಂತ ಪ್ರತಿಷ್ಠಿತ ಸ್ಮಾರ್ಟ್​ಫೋನ್ ಕಂಪನಿಯಾದ ಆ್ಯಪಲ್​ಗೆ ಚೀಫ್ ಫೈನಾನ್ಷಿಯಲ್ ಆಫೀಸರ್ ಆಗಿ ಭಾರತ ಮೂಲದ ಕೇವನ್ ಪರೇಖ್ ನೇಮಕವಾಗಿದ್ದಾರೆ. ಲ್ಯೂಕಾ ಮೇಸ್ಟ್ರಿ ಅವರ ಸ್ಥಾನವನ್ನು ಪರೇಖ್ ತುಂಬಲಿದ್ದಾರೆ. ಲೂಕಾ ಅವರು ಸಿಎಫ್​ಒ ಸ್ಥಾನದಿಂದ ಹೊರಹೋಗುತ್ತಾರಾದರೂ ಆ್ಯಪಲ್ ಕಂಪನಿಯಲ್ಲಿ ಅವರು ಬೇರೆ ಜವಾಬ್ದಾರಿಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

   ಪ್ರಸಕ್ತ ಸಿಎಫ್​ಒ ಆಗಿರುವ ಲೂಕಾ ಮೇಸ್ಟ್ರಿ ಅವರು 2024ರ ಡಿಸೆಂಬರ್ 31ರವರೆಗೂ ಅದೇ ಸ್ಥಾನದಲ್ಲಿ ಮುಂದುವರಿದು ಆ ಬಳಿಕ ಹುದ್ದೆಯನ್ನು ಕೇವನ್ ಪರೇಖ್ ಅವರಿಗೆ ಬಿಟ್ಟು ಕೊಡಲಿದ್ದಾರೆ. ಆ ಬಳಿಕ ಇನ್ಫಾರ್ಮೇಶನ್ ಸಿಸ್ಟಮ್ಸ್ ಮತ್ತ ಟೆಕ್ನಾಲಜಿ, ಇನ್ಫಾರ್ಮೇಶನ್ ಸೆಕ್ಯೂರಿಟಿ, ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಸೇರಿದಂತೆ ವಿವಿಧ ಕಾರ್ಪೊರೇಟ್ ಸರ್ವಿಸ್ ಟೀಮ್​ಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಲೂಕಾ ಅವರು ಸಿಎಫ್​ಒ ಆಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಆ್ಯಪಲ್​ನ ಆದಾಯ ಎರಡು ಪಟ್ಟು ಹೆಚ್ಚಾಗಿತ್ತು. ಸರ್ವಿಸ್​ಗಳಿಂದ ಬರುತ್ತಿದ್ದ ಆದಾಯ ಐದು ಪಟ್ಟು ಹೆಚ್ಚಾಗಿತ್ತು.

    ಕೇವನ್ ಪರೇಖ್ ಅವರಿಗೆ ಲೂಕಾ ಮೇಸ್ಟ್ರಿ ಅವರ ಕೆಲಸದ ಮೇಲ್ಪಂಕ್ತಿ ಇದೆ. ಆ್ಯಪಲ್​ನಲ್ಲಿರುವ ಬಂಡವಾಳವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವುದು ದೊಡ್ಡ ಸವಾಲು. ಬೇರೆ ಸಣ್ಣ ಪುಟ್ಟ ಸಂಸ್ಥೆಗಳನ್ನು ಖರೀದಿಸುವ ಅವಕಾಶಗಳನ್ನು ಅವರು ಹುಡುಕಬೇಕಿದೆ.

Recent Articles

spot_img

Related Stories

Share via
Copy link
Powered by Social Snap