ಕೆಜಿಎಫ್ 2 :
ಅಲ್ಲು ಅರ್ಜುನ್ ಟಾಲಿವುಡ್ ಮಂದಿಗೆ ಸ್ಟೈಲಿಶ್ ಸ್ಟಾರ್ ಆಗಿ ಉಳಿದಿಲ್ಲ. ‘ಪುಷ್ಪ’ದಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನೀಡಿದ ಬಳಿಕ ಐಕಾನ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 300 ಕೋಟಿಗೂ ಅಧಿಕ ಗಳಿಕೆ ಕಂಡು ಅಚ್ಚರಿ ಮೂಡಿಸಿತ್ತು.
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ‘ಪುಷ್ಪ’ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಈಗ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿಯೇ ‘ಪುಷ್ಪ’ ಬೇಜಾನ್ ಸದ್ದು ಮಾಡಿದೆ. ಆದರೆ, ‘ಬಾಹುಬಲಿ 2’, RRR, ‘ಕೆಜಿಎಫ್ 2’ ದಾಖಲೆಗಳ ಮುಂದೆ ಅಲ್ಲುಅರ್ಜುನ್ ‘ಪುಷ್ಪ’ಗಳಿಸಿದ ಗಳಿಕೆ ಕಮ್ಮಿನೇ.
‘ಬಾಹುಬಲಿ 2’, RRR, ‘ಕೆಜಿಎಫ್ 2’ ಈ ಮೂರು ದಕ್ಷಿಣದ ಸಿನಿಮಾ ವಿಶ್ವದ ಬಾಕ್ಸಾಫೀಸ್‌ನಲ್ಲಿ ಕಬಳಿಸಿದ್ದಕ್ಕಿಂತ ದುಪ್ಪಟ್ಟು ಹಣವನ್ನು ‘ಪುಷ್ಪ 2’ ಕಲೆ ಹಾಕಬೇಕಿದೆ. ಜನರು ಕೂಡ ‘ಪುಷ್ಪ 2’ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸಿನಿಮಾ ಶೂಟಿಂಗ್ ಆರಂಭ ಆಗುವುದೇ ಜೂನ್ ತಿಂಗಳಿನಿಂದ. ಈ ಕಾರಣಕ್ಕೆ ‘ಪುಷ್ಪ 2’ ಈ ವರ್ಷ ಬಿಡುಗಡೆಯಾಗುವುದು ಅನುಮಾನ. ಇದರ ಜೊತೆನೇ ದಾಖಲೆ ಬರೆದ ಮೂರು ಸಿನಿಮಾಗಳ ರೆಕಾರ್ಡ್ ಅನ್ನು ಬ್ರೇಕ್ ಮಾಡುವ ಒತ್ತಡವಿದೆ.
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021 ತಂತ್ರಜ್ಞಾನದ ಸ್ಪರ್ಷ: ಕರ್ನಾಟಕದ ಸಾಧನೆ
‘ಕೆಜಿಎಫ್ 2’, ‘ಬಾಹುಬಲಿ 2’, ‘RRR’ ದಾಖಲೆ ಮುರಿಯಲು ‘ಪುಷ್ಪ 2’ ಮಾಸ್ಟರ್ ಪ್ಲ್ಯಾನ್ ಮಾಡಲೇ ಬೇಕಿದೆ. ಈ ಕಾರಣಕ್ಕೆ ‘ಪುಷ್ಪ 2’ ಸಿನಿಮಾ ತಂಡದ ಮೇಲೆ ಒತ್ತಡ ಹೆಚ್ಚಾಗಿದೆ. ‘ಪುಷ್ಪ’ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಚ್ಚರಿಯ ಎನ್ನುವಂತೆ ಗಳಿಕೆ ಮಾಡಿದೆ. ಹೀಗಾಗಿ ‘ಪುಷ್ಪ 2’ ಕೂಡ ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಜಾದು ಮಾಡಲೇ ಬೇಕಿದೆ. ಹೀಗಾಗಿ ಸಿನಿಮಾ ಶೂಟಿಂಗ್ ಆರಂಭ ಮಾಡುವುದಕ್ಕೂ ಮುನ್ನವೇ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಎನ್ನುತ್ತಿದೆ ಟಾಲಿವುಡ್.
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ‘ಬಾಹುಬಲಿ 2’, RRR, ‘ಕೆಜಿಎಫ್ 2’ ಈ ಮೂರು ಸಿನಿಮಾಗಳ ದಾಖಲೆ ಮುರಿಯಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರಂತೆ. ಈ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮುರಿಯಲೇ ಬೇಕು ಅಂತ ಅಲ್ಲು ಅರ್ಜುನ್ ಪಣ ತೊಟ್ಟು ನಿಂತಿದ್ದಾರಂತೆ. ಈ ಕಾರಣಕ್ಕೆ ‘ಕೆಜಿಎಫ್ 2’ ಹಾದಿಯನ್ನೇ ಹಿಡಿಯಲಿದ್ದಾರೆ ಎನ್ನಲಾಗಿದೆ. ಸಿನಿಮಾವನ್ನು ಗ್ಲೋಬಲ್ ಮಾರುಕಟ್ಟೆಯಲ್ಲಿ ಗೆಲ್ಲಿಸಲು ಸಿನಿಮಾದ ಬಜೆಟ್ ಅನ್ನು ದುಪ್ಪಟ್ಟು ಮಾಡುತ್ತಿದ್ದಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೆಯುತ್ತಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭೇಟಿ
‘ಕೆಜಿಎಫ್ ಚಾಪ್ಟರ್ 1’ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಬಾಲಿವುಡ್‌ನಲ್ಲಿ ಹೆಚ್ಚು ಕಡಿಮೆ 50 ಕೋಟಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ಮುರಿಯುವುದೇ ‘ಪುಷ್ಪ’ ಸಿನಿಮಾದ ಗುರಿಯಾಗಿತ್ತು. ಅದರಂತೆ ‘ಪುಷ್ಪ’ ಬಾಲಿವುಡ್‌ನಲ್ಲಿ100 ಕೋಟಿ ಗಳಿಕೆ ಕಾಣುವ ಮೂಲಕ ಆ ಸಾಧನೆಯನ್ನು ಮಾಡಿತ್ತು. ಮೊದಲಿನಿಂದಲೂ ‘ಕೆಜಿಎಫ್’ ಸಿನಿಮಾವನ್ನು ಟಾರ್ಗೆಟ್ ಮಾಡುತ್ತಾ ಬಂದಿತ್ತು. ಅದರಂತೆ ‘ಪುಷ್ಪ’ ಗ್ಲೋಬಲ್ ಮಾರ್ಕೆಟ್‌ನಲ್ಲಿ ಕೆಜಿಎಫ್ ಗಳಿಸಿದ್ದ 250 ಕೋಟಿ ದಾಖಲೆಯನ್ನೂ ಉಡೀಸ್ ಮಾಡಿತ್ತು. ಈಗ ‘ಪುಷ್ಪ’, ‘ಕೆಜಿಎಫ್ 2’ ಬಾಕ್ಸಾಫೀಸ್ ರೆಕಾರ್ಡ್ ಅನ್ನು ಅಳಿಸಿ ಹಾಕಲು ಸಜ್ಜಾಗಬೇಕಿದೆ.
‘ಕೆಜಿಎಫ್ 2’ ಸಿನಿಮಾ ದಿನಕ್ಕೆ 670 ಕೋಟಿ ಲೂಟಿ ಮಾಡಿದೆ. ಇನ್ನೊಂದು ಕಡೆ RRR ಸಾವಿರ ಕೋಟಿ ಲೂಟಿ ಮಾಡಿದೆ. ಬಾಹುಬಲಿ 1700 ಕೋಟಿ ಗಳಿಸಿದೆ. ‘ಕೆಜಿಎಫ್ 2’ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಇಷ್ಟೂ ದಾಖಲೆಗಳನ್ನು ಮುರಿಯಬೇಕು ಅಂದರೆ, ಪುಷ್ಪ ಮಾಸ್ಟರ್ ಪ್ಲ್ಯಾನ್ ಮಾಡಲೇ ಬೇಕಿದೆ. ಸ್ಟಾರ್ ಕಾಸ್ಟ್ ಅನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲೇ ಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ