KGF 2 :
ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಆರ್ಭಟ ಮುಂದುವರೆದಿದೆ. RRR ಬಳಿಕ ‘ಕೆಜಿಎಫ್ 2’ ಸಿನಿಮಾ ಬಾಕ್ಸಾಫೀಸ್ ನಡುಗುವಂತೆ ಮಾಡುತ್ತಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು 15ನೇ ದಿನವೂ ಹೊಸ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿರುವುದು ನೋಡಿದರೆ, ಅತೀ ಶೀಘ್ರದಲ್ಲಿಯೇ 1000 ಕೋಟಿ ಕ್ಲಬ್ ಸೇರಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.
‘ಕೆಜಿಎಫ್ 2’ ಇದೇ ವೀಕೆಂಡ್‌ನಲ್ಲಿ 1000 ಕೋಟಿ ತಲುಪಬಹುದಾ? ಇಲ್ಲಾ ಈ ವಾರ ಬಿಡುಗಡೆಯಾಗಿರುವ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳು ‘ಕೆಜಿಎಫ್ 2’ ಕಲೆಕ್ಷನ್‌ಗೆ ಬ್ರೇಕ್ ಹಾಕುತ್ತಾ? ಅನ್ನೋ ಕುತೂಹಲವಿದೆ.ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ.
ಕೋವಿಡ್ 4ನೇ ಅಲೆ ಭೀತಿ : ರಾಜ್ಯದಲ್ಲಿ ಸವಾಲಾದ ‘ಜೀನೋಮ್ ಅನುಕ್ರಮ ಪರೀಕ್ಷೆ’
ಕಳೆದ ಎರಡು ವಾರಗಳಿಂದ ಬಾಕ್ಸಾಫೀಸ್‌ನಲ್ಲಿ ತನ್ನದೇ ದರ್ಬಾರ್ ನಡೆಸಿದೆ. ಈ ಸಿನಿಮಾ ಅದ್ಯಾರೇ ಬಂದರೂ ತನ್ನ ವೇಗವನ್ನು ಮಾತ್ರ ಕಡಿಮೆ ಮಾಡಿರಲಿಲ್ಲ. ಹೀಗಾಗಿ 15ನೇ ದಿನದ ಗಳಿಕೆ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡುತ್ತಿದೆ. ಈ 15 ದಿನಗಳಲ್ಲಿ ‘ಕೆಜಿಎಫ್ 2’ ಕಲೆಕ್ಷನ್ ಎಷ್ಟು ಮಾಡಿದೆ? 1000 ಕೋಟಿಗೆ ಇನ್ನೆಷ್ಟು ಬೇಕು? ಅನ್ನುವ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
‘ಕೆಜಿಎಫ್ 2’ 15ನೇ ದಿನದ ಕಲೆಕ್ಷನ್ ಎಷ್ಟು?
ವಿಶ್ವದುದ್ದಕ್ಕೂ ಸಂಚಲನ ಸೃಷ್ಟಿಸಿದ ‘ಕೆಜಿಎಫ್ 2’ ಸಿನಿಮಾ 15 ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ನಿರಂತರ ಕಲೆಕ್ಷನ್ ಮಾಡಿದೆ. ಹೆಚ್ಚು ಕಡಿಮೆ 14ನೇ ದಿನ ಎಷ್ಟು ಗಳಿಕೆ ಮಾಡಿತ್ತೋ, ಅಷ್ಟರಲ್ಲೇ 15ನೇ ದಿನದ ಗಳಿಕೆನೂ ಅಷ್ಟೇ ಇದೆ. ಟ್ರೇಡ್ ಅನಲಿಸ್ಟ್ ಪ್ರಕಾರ, ‘ಕೆಜಿಎಫ್ 2’ ಸಿನಿಮಾ 15ನೇ ದಿನ 10.90 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಕಾಲೇಜು ವಿದ್ಯಾರ್ಥಿನಿ ಬಳಿ ಬರೋಬ್ಬರಿ 30 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ
15 ದಿನದ ಒಟ್ಟು ಕಲೆಕ್ಷನ್ ಎಷ್ಟು?
‘ಕೆಜಿಎಫ್ 2’ ಸಿನಿಮಾ ಬಾಕ್ಸಾಫೀಸ್‌ನಲ್ಲಿ 14 ಹಾಗೂ 15ನೇ ದಿನ ಸ್ಟಡಿಯಾಗಿದೆ. 14ನೇ ದಿನಕ್ಕಿಂತ 15ನೇ ದಿನ ಕಲೆಕ್ಷನ್ ವಿಚಾರ ಕಡಿಮೆಯಾಗಿದ್ದರೂ, ಇದು ಹೀಗೆ ಮುಂದುವರೆದರೆ, 1000 ಕೋಟಿ ದಾಟಲು ಇನ್ನೂ ಒಂದು ವಾರ ಬೇಕಾಗಬಹುದು ಎನ್ನಲಾಗುತ್ತಿದೆ.
15ನೇ ದಿನ ‘ಕೆಜಿಎಫ್ 2’ 10.90 ಕೋಟಿ ಗಳಿಸಿದ್ದು, ಟ್ರೇಡ್ ಅನಲಿಸ್ಟ್ ಕಲೆಕ್ಷನ್ ಅನ್ನು ಅಪ್‌ಡೇಟ್ ಮಾಡಿದ್ದಾರೆ. ಮನೋಬಾಲ ವಿಜಯ ಬಾಲನ್ ಪ್ರಕಾರ, ‘ಕೆಜಿಎಫ್ 2’ ಎರಡು ವಾರಗಳಲ್ಲಿ 943 ಕೋಟಿ ಗಳಿಸಿದೆ ಎಂದಿದ್ದಾರೆ. ಆದರೆ, ಇನ್ನೊಂದು ಮೂಲದ ಪ್ರಕಾರ, ಸಿನಿಮಾ 968 ಕೋಟಿ ಗಳಿಸಿದೆ ಎನ್ನಲಾಗಿದೆ.
ಮೇ 3 ರಂದು ರಾಜ್ಯಕ್ಕೆ ಷಾ ಭೇಟಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ
‘KGF 2’ 15 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
1ನೇ ದಿನ Rs 164.20 Cr (ಅಂದಾಜು)
2ನೇ ದಿನ Rs 128.90 Cr (ಅಂದಾಜು)
3ನೇ ದಿನ: Rs 137.10 Cr (ಅಂದಾಜು)
4ನೇ ದಿನ: Rs 127.25 Cr (ಅಂದಾಜು)
5ನೇ ದಿನ: Rs 66.35 Cr (ಅಂದಾಜು)
6ನೇ ದಿನ: Rs 52.35 Cr (ಅಂದಾಜು)
7ನೇ ದಿನ: Rs 43.15 Cr (ಅಂದಾಜು)
8ನೇ ದಿನ: Rs 31.05 Cr (ಅಂದಾಜು)
9ನೇ ದಿನ: Rs 25.05 Cr (ಅಂದಾಜು) (Updated)
10ನೇ ದಿನ: Rs 55.85 Cr (ಅಂದಾಜು) (Updated)
11 ನೇ ದಿನ Rs 69.30 Cr (ಅಂದಾಜು) (Updated)
12ನೇ ದಿನ Rs 24.80 Cr (ಅಂದಾಜು) (Updated)
13ನೇ ದಿನ Rs 17.40 Cr (ಅಂದಾಜು) (Updated)
14ನೇ ದಿನ Rs 15.00 Cr (ಅಂದಾಜು)
15ನೇ ದಿನ Rs 10.90 Cr (ಅಂದಾಜು)
ಒಟ್ಟು: Rs 968.25 Cr (ಅಂದಾಜು)
ಪಿಎಸ್‌ಐ ನೇಮಕಾತಿ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ನಿರ್ಧಾರ – ಗೃಹ ಸಚಿವ ಅರಗ ಜ್ಞಾನೇಂದ್ರ ಘೋಷಣೆ
ಅದೇ ಇನ್ನೊಂದು ಕಡೆ ಮನೋಬಾಲ ವಿಜಯ ‘ಕೆಜಿಎಫ್ 2’ ಎರಡು ವಾರದ ಕಲೆಕ್ಷನ್ 943 ಕೋಟಿ ಎಂದು ಲೆಕ್ಕಕೊಟ್ಟಿದ್ದಾರೆ. ಆ ವಿವರ ಹೀಗಿದೆ.
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಎಷ್ಟು ಕೋಟಿ?
‘ಕೆಜಿಎಫ್ 2’ ಸಿನಿಮಾ 15ನೇ ದಿನ ಹಿಂದಿ ಬೆಲ್ಟ್‌ನಿಂದ ಸುಮಾರು 5.68 ಕೋಟಿ ಗಳಿಸಿದೆ. ಈ ಮೂಲಕ 15 ದಿನಗಳ ಗಳಿಕೆ 350 ಕೋಟಿ ಎಂದು ಟ್ರೇಡ್ ಅನಲಿಸ್ಟ್ ತರನ್ ಅದರ್ಶ್ ತಿಳಿಸಿದ್ದಾರೆ. ಈ ಮೂಲಕ ಎರಡು ವಾರಗಳಲ್ಲಿ ಹಿಂದಿ ಬಾಕ್ಸಾಫೀಸ್ ಕಲೆಕ್ಷನ್ 348.81 ಕೋಟಿ ಗಳಿಸಿದೆ.
ರಾಜ್ಯದ ಜತೆಗೆ ಬಿಗ್ ಶಾಕ್ : ಬೆಂಗಳೂರಲ್ಲಿ BA.10, BA.2,12 ಕೊರೊನಾ ಹೊಸ ರೂಪಾಂತರಿ ವೈರಸ್ ಪತ್ತೆ
ನಾಲ್ಕು ಸಿನಿಮಾಗಳಿಂದ ‘ಕೆಜಿಎಫ್ 2’ಗೆ ಟಕ್ಕರ್
ಮೂರನೇ ವಾರ ‘ಕೆಜಿಎಫ್ 2’ ಗಳಿಕೆ ವೇಗಕ್ಕೆ ನಾಲ್ಕು ಸಿನಿಮಾಗಳು ಟಕ್ಕರ್ ಕೊಡುವ ಸಾಧ್ಯತೆಯಿದೆ. ಹಿಂದಿಯಲ್ಲಿ ‘ಹೀರೊಪಂತಿ 2’, ರನ್‌ವೇ 34, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಆಚಾರ್ಯ ರಿಲೀಸ್ ಆಗಿದ್ದು, ‘ಕೆಜಿಎಫ್ 2’ ವೇಗಕ್ಕೆ ಕಡಿವಾಣ ಹಾಕಬಹುದು. ಇನ್ನೊಂದು ಕಡೆ ತಮಿಳಿನಲ್ಲಿ 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ಪ್ರದರ್ಶನ ಕಾಣುತ್ತಿದೆ. ನಯನತಾರ, ಸಮಂತಾ ಅಭಿನಯದ ಸಿನಿಮಾ ‘ಕಾತುವಾಕುಲಾ ರೆಂಡು ಕಾದಲ್’ ಮೊದಲ ದಿನವೇ ‘ಕೆಜಿಎಫ್ 2’ ಚಿತ್ರದ 15ನೇ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಹೀಗಾಗಿ ‘ಕೆಜಿಎಫ್ 2’ ಕಲೆಕ್ಷನ್ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ