KGF 2: ಕೆಜಿಎಫ್​ ಚಾಪ್ಟರ್​ 3 ಸಿನಿಮಾದಲ್ಲಿ ಇವ್ರು ವಿಲನ್​ ಅಂತೆ! ‘ಬಾಹುಬಲಿ’ಲೇ ಅಬ್ಬರಿಸಿದ್ರು, ಇನ್ನು ಇಲ್ಲಿ ಬಿಡ್ತಾರಾ?

KGF 2 :

ರಾಕಿಂಗ್ ಸ್ಟಾರ್ ಯಶ್  ಮತ್ತು ನಿರ್ದೇಶಕ ಪ್ರಶಾಂತ್ ನೀಲ್  ನಿರ್ದೇಶನದ ‘ಕೆಜಿಎಫ್ – 2’ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಅದರೊಂದಿಗೆ ಬಾಕ್ಸ್ ಆಫೀಸ್​ ನಲ್ಲಿ ಭರ್ಜರಿ ಕಲೇಕ್ಷನ್ ಮಾಡುತ್ತಿದ್ದು, ರಾಕಿ ಬಾಯ್ ಅಬ್ಬರವನ್ನು ತಡಯಲು ಯಾರಿಂದಲೂ ಆಗುತ್ತಿಲ್ಲ.
ಕನ್ನಡ  ಚಲನಚಿತ್ರೋದ್ಯಮದ ಒಂದು ಚಿತ್ರ ದೇಶಾದ್ಯಂತ ಬಾಕ್ಸ್ ಆಫೀಸ್  ಗಲ್ಲಾ ಪೆಟ್ಟಿಗೆಯಲ್ಲಿ ಇಷ್ಟೊಂದು ಹಣ ಗಳಿಸಿ ಮತ್ತು ಬೇರೆ ಬೇರೆ ರಾಜ್ಯ ದ ಚಲನಚಿತ್ರೋದ್ಯಮದಲ್ಲಿ ಈ ರೀತಿ ದೊಡ್ಡ ಸುದ್ದಿ ಮಾಡಿದ ಚಿತ್ರ ಮತ್ತೊಂದಿರಲಿಲ್ಲ ಎಂದು ಹೇಳಬಹುದು. ‘ಕೆಜಿಎಫ್ 2’ ಬಾಲಿವುಡ್‌ನ ಸ್ಟಾರ್ ನಟರನ್ನೇ ಹಿಂದಿಕ್ಕಿಬಿಟ್ಟಿದ್ದಾರೆ. ಕೆಜಿಎಫ್​ 3 ಬರುವುದು ಪಾರ್ಟ್ 2ನಲ್ಲೇ ಸುಳಿವು ನೀಡಲಾಗಿದೆ. ಇದೀಗ ಚಾಪ್ಟರ್​ 3 ಬಗ್ಗೆ ಬಿಗ್​ ಅಪ್​ಡೇಟ್​ ಸಿಕ್ಕಿದೆ. ಈ ಅಪ್​ಡೇಟ್​ ಕೇಳಿ ಅಭಿಮಾನಿಗಳು ಸುಸ್ತಾಗಿ ಹೋಗಿದ್ದಾರೆ.
ಕೆಜಿಎಫ್​ ಚಾಪ್ಟರ್​ 3 ಬರೋದು ಕನ್ಫರ್ಮ್​!ಸಿನಿಮಾದ ಕೊನೇ ಸೀನ್ ನೋಡಿದವರಿಗೆಲ್ಲ ಒಂದು ಅಚ್ಚರಿ ಸಿಕ್ಕಿದೆ. ಅದೇನೆಂದರೆ, ‘ಕೆಜಿಎಫ್: ಚಾಪ್ಟರ್ 3’ ಶುರುವಾಗಲಿದೆ ಎಂಬುದು. ಈ ಬಗ್ಗೆ ಯಾರೂ ಕೂಡ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದರೆ ನಟ ಯಶ್ ಈಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ಇದೀಗ ಈ ಸಿನಿಮಾದ ಮತ್ತೊಂದು ಅಪ್​ಡೇಟ್ ಸಿಕ್ಕಿದೆ.ಕೆಜಿಎಫ್​ 2 ಸಿನಿಮಾದಲ್ಲಿ ಸಂಜಯ್​ ದತ್​ ಅಧೀರನ ಪಾತ್ರದಲ್ಲಿ ಮಿಂಚಿದ್ದರು. ಕೆಜಿಎಫ್​ 2 ಸಿನಿಮಾದ ಕೊನೆಯಲ್ಲಿ ಅಧೀರನ ಪಾತ್ರ ಸಾಯುತ್ತೆ. ನಂತರ ಕೆಜಿಎಫ್​ 3ಗೆ ಲಿಂಕ್​ ಕೊಡಲಾಗಿದೆ. ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ಚಾಪ್ಟರ್​3ಗೆ ಯಾರು ವಿಲನ್​ ಎಂಬುದರ ಬಗ್ಗೆ ಚರ್ಚೆಯಾಗುತ್ತಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.

‘ಕೆಜಿಎಫ್: ಚಾಪ್ಟರ್ 3’ ಚಿತ್ರದಲ್ಲಿ ನಟಿಸುತ್ತಾರಾ ರಾಣಾ ದಗ್ಗುಬಾಟಿ?

ಇದೀಗ ‘ಕೆಜಿಎಫ್: ಚಾಪ್ಟರ್ 3′ ಸಿನಿಮಾದಲ್ಲಿ ಖಳನಾಯಕನಾಗಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಬಹುದಾ? ಹೀಗಂತ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಊಹಿಸುತ್ತಿದ್ದಾರೆ. ನಟ ಯಶ್ ಮಾಡಿರುವ ಒಂದು ಟ್ವೀಟ್ ಈ ಸುಳಿವನ್ನು ನೀಡಿದೆ.ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆಯಾದ ಬಳಿಕ “ನೀವು ಮತ್ತೊಮ್ಮೆ ಸಾಧಿಸಿದ್ದೀರಿ. ಸಿನಿಮಾ ಚೆನ್ನಾಗಿದೆ. ಇಡೀ ‘ಕೆಜಿಎಫ್’ ತಂಡಕ್ಕೆ ನನ್ನ ಅಭಿನಂದನೆಗಳು” ಎಂದು ನಟ ರಾಣಾ ದಗ್ಗುಬಾಟಿ ಟ್ವೀಟ್ ಮಾಡಿದ್ದರು.

ಆದಷ್ಟು ಬೇಗ ಸಿಗೋಣ ಎಂದ ರಾಕಿಂಗ್​ ಸ್ಟಾರ್​ ಯಶ್​!ರಾಣಾ ದಗ್ಗುಬಾಟಿ ಟ್ವೀಟ್​ಗೆ ನಟ ಯಶ್​ ರೀ ಟ್ವೀಟ್​ ಮಾಡಿದ್ದಾರೆ. “ಧನ್ಯವಾದ ಸಹೋದರ. ಆದಷ್ಟು ಬೇಗ ಭೇಟಿಯಾಗೋಣ” ಎಂದು ಟ್ವೀಟ್​ ಮಾಡಿಸಿದ್ದಾರೆ. ಅದಕ್ಕೆ, ”ಹೌದು.. ಇದು ಸೆಲೆಬ್ರೇಷನ್ ಸಮಯ” ಅಂತ ರಾಣಾ ದಗ್ಗುಬಾಟಿ ಟ್ವಿಟ್ಟರ್‌ನಲ್ಲಿ ರಿಪ್ಲೈ ಮಾಡಿದ್ದರು. ಇನ್ನೂ, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ರಾಣಾ ದಗ್ಗುಬಾಟಿಗೆ ಧನ್ಯವಾದ ತಿಳಿಸಿದ್ದರು.

ಯಶಸ್ವಿ 25 ದಿನ ಪೂರೈಸಿದ ಕೆಜಿಎಫ್​ 2 ಸಿನಿಮಾ!ಕೆಜಿಎಫ್ ಚಾಪ್ಟರ್ 2′ ಬಿಡುಗಡೆಯಾಗಿ ನಿನ್ನೆಗೆ (ಮೇ 8) 25 ದಿನಗಳನ್ನು ಪೂರೈಸಿದೆ. ಕಳೆದ 24 ದಿನಗಳಲ್ಲಿ ‘ಕೆಜಿಎಫ್ 2′ ಸಿನಿಮಾ ಹಲವು ದಾಖಲೆಗಳನ್ನು ಮುರಿದಿದೆ. ಕನ್ನಡದ ಜೊತೆ ಜೊತೆಗೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕಲೆಕ್ಷನ್ ಭೇಟೆ ಮುಂದುವರೆಸಿದೆ. ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ಇಂದಿಗೆ (ಮೇ 8) 25 ದಿನಗಳಾಗಿವೆ. ಕಳೆದ 24 ದಿನಗಳಲ್ಲಿ ‘ಕೆಜಿಎಫ್ 2’ ಸಿನಿಮಾವನ್ನೂ ಬೇರೆ ಯಾರೂ ಕೂಡ ಟಚ್​ ಮಾಡುವುದಕ್ಕೆ ಆಗಿಲ್ಲ. 25 ದಿನಗಳಲ್ಲಿ ‘ಕೆಜಿಎಫ್ 2’ ಕಲೆಕ್ಷನ್ ಪಟ್ಟಿಗೆ ಇನ್ನೊಂದು ನೂರು ಕೋಟಿ ಸೇರ್ಪಡೆಯಾಗಿದೆ.

ಏಪ್ರಿಲ್​ 14ರಂದು ರಿಲೀಸ್ ಆಗಿದ್ದ ಕೆಜಿಎಫ್ 2 ವಿಶ್ವ ಬಾಕ್ಸ್​ ಆಫೀಸ್​ ಲೂಟಿ ಮಾಡಿದೆ. 25 ದಿನ ಪೂರೈಸಿರುವ ಕೆಜಿಎಫ್​ 2 ಸಿನಿಮಾ ಇಲ್ಲಿಯವರೆಗೂ ಒಟ್ಟು 1129 ಕೋಟಿ ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗಿದೆ. ಆರ್​​ಆರ್​​ಆರ್​ ಸಿನಿಮಾದ ಕಲೆಕ್ಷನ್​ ಬೀಟ್​ ಮಾಡಿದೆ ಕೆಜಿಎಫ್​ 2 ಸಿನಿಮಾ ಎಂದು ಹೇಳಲಾಗುತ್ತಿದೆ. ಆರ್​ಆರ್​​ಆರ್​ 1127 ಕೋಟಿ ಗಳಿಸಿದೆ. ಇದನ್ನು ಕೆಜಿಎಫ್​ 2 ಮುರಿದಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap