‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ!

ವಿಕ್ರಾಂತ್ ರೋಣ :

ಸದ್ಯ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ಸೌತ್ ಚಿತ್ರರಂಗದಲ್ಲಿ ಬರುವ ಸಿನಿಮಾಗಳು ಹೆಚ್ಚಿನ ಕುತೂಹಲ ಹುಟ್ಟಿಸಿವೆ. ಅದರಲ್ಲೂ ಸ್ಟಾರ್ ನಟರ ದೊಡ್ಡ ಬಜೆಟ್ ಚಿತ್ರಗಳು ಯಾವ ಮಟ್ಟದಲ್ಲಿ ಬರಲಿವೆ. ಈ ಚಿತ್ರಗಳು ಪ್ಯಾನ್ ಇಂಡಿಯಾ ಆಗುತ್ತವೆಯಾ ಎನ್ನುವ ಬಗ್ಗೆಯೇ ಹೆಚ್ಚಿನ ಕುತೂಹಲ ಕಾಡುತ್ತೆ.

ಅದರಲ್ಲೂ ಕನ್ನಡದ ‘ಕೆಜಿಎಫ್ 2’ ಚಿತ್ರ ರಿಲೀಸ್ ಬಳಿಕ ಕನ್ನಡದ ಸ್ಟಾರ್ ನಟರ ಚಿತ್ರಗಳ ಮೇಲೆ ಹೆಚ್ಚಿನ ಕುತೂಹಲ ಮೂಡಿದೆ. ಹಾಗಾಗಿ ಈಗ ರಿಲೀಸ್‌ಗೆ ರೆಡಿಯಾಗಿರುವ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಮೇಲೂ ಹೆಚ್ಚಿನ ಕುತೂಹಲ ಮೂಡಿದೆ. ಆದರೆ ‘ವಿಕ್ರಾಂತ್ ರೋಣ’ ನಿರೀಕ್ಷೆಗಳನ್ನು ಮೀರಿ ಒಂದು ಹೆಜ್ಜೆ ಮುಂದೆ ಹೋಗಿದೆ.

ಹಿಂದಿಯಲ್ಲಿ 400 ಕೋಟಿ ರೂ. ಬಾಚಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಯಶ್​ ಚಿತ್ರ ಗಳಿಸಿದ್ದು 1100 ಪ್ಲಸ್​ ಕೋಟಿ

ಹೌದು ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರವನ್ನು ಇನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ಈ ಚಿತ್ರ ಕನ್ನಡದ ಮತ್ತೊಂದು ಮೈಲಿಗಲ್ಲು ಆಗಲಿದೆ. ‘ವಿಕ್ರಾಂತ್ ರೋಣ’ ಚಿತ್ರವನ್ನು ಇನ್ನು ಮುಂದೆ ಪ್ಯಾನ್ ವರ್ಲ್ಡ್ ಸಿನಿಮಾ ಅಂತಲೇ ಕರೆಯಬೇಕು.

ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ ; ಕ್ಷಮೆ ಕೇಳಿದ ಅನುಶ್ರೀ

       ನಟ ಸುದೀಪ್ ಇಂದು, ನಿನ್ನೆ ಕನ್ನಡದ ಗಡಿ ದಾಟಿದವರಲ್ಲ. ಹಲವು ವರ್ಷಗಳ ಹಿಂದೆಯೇ ಸುದೀಪ್ ಬಾಲಿವುಡ್, ಟಾಲಿವುಡ್ ಚಿತ್ರಗಳ ಮೂಲಕ ಛಾಪು ಮೂಡಿಸಿದ್ದಾರೆ. ಈಗ ಸುದೀಪ್ ‘ವಿಕ್ರಾಂತ್ ರೋಣ’ ಸಿನಿಮಾದ ಮೂಲಕ ಮತ್ತೊಂದು ಹೊಸ ದಾಖಲೆ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದ ಬಗ್ಗೆ ಈಗ ಒಂದೊಂದೇ ಮಾಹಿತಿಗಳು ಹೊರ ಬೀಳುತ್ತಿದೆ. ಹಾಗೆ ನೋಡಿದರೆ ಈ ಚಿತ್ರ ಕನ್ನಡದ ಮತ್ತೊಂದು ಮೈಲಿಗಲ್ಲು ಆಗುವುದರಲ್ಲಿ ಅನುಮಾನವಿಲ್ಲ.

 JDS ನಲ್ಲಿ ಹಣವಿದ್ದವರಿಗೆ ಟಿಕೆಟ್; MLC ಮರಿತಿಬ್ಬೇಗೌಡ ಆಕ್ರೋಶ; ದೇವೇಗೌಡರು, HDK ವಿರುದ್ಧ ಅಸಮಾಧಾನ

‘ವಿಕ್ರಾಂತ್ ರೋಣ’ ಸಿನಿಮಾ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಾಗಂತ ಈ ಚಿತ್ರವನ್ನು ‘ಕೆಜಿಎಫ್ 2’, ಲಿಸ್ಟ್‌ಗೆ ಸೇರಿಸಲು ಆಗುವುದಿಲ್ಲ. ಯಾಕೆಂದರೆ ‘ವಿಕ್ರಾಂತ್ ರೋಣ’ ಕೆಜಿಎಫ್ 2′ ಸಿನಿಮಾಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದೆ. ‘ವಿಕ್ರಾಂತ್ ರೋಣ’ ಚಿತ್ರವನ್ನು ಪ್ಯಾನ್ ಇಂಡಿಯಾ ಇಲ್ಲ. ಪ್ಯಾನ್ ವರ್ಲ್ಡ್ ಸಿನಿಮಾ ಅಂತಲೇ ಕರೆಯಬೇಕು. ಯಾಕೆಂದರೆ ಭಾರತೀಯ ಭಾಷೆಗಳನ್ನು ಹೊರತುಪಡಿಸಿ ವಿಶ್ವದ ಕೆಲವು ದೇಶಿಯ ಭಾಷೆಗಳಲ್ಲಿ ‘ವಿಕ್ರಾಂತ್ ರೋಣ’ ರಿಲೀಸ್ ಆಗುತ್ತಿದೆ.

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭಾರೀ ಮಳೆ

‘ವಿಕ್ರಾಂತ್ ರೋಣ’ ಸಿನಿಮಾ ಭಾರತದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇಷ್ಟಕ್ಕೆ ‘ವಿಕ್ರಾಂತ್ ರೋಣ’ ಸೀಮಿತ ಆಗಿಲ್ಲ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಜರ್ಮನ್, ರಷ್ಯನ್, ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇದು ‘ವಿಕ್ರಾಂತ್ ರೋಣ’ ವಿಶೇಷತೆ. ಹಾಗಾಗಿ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಕರೆಯಬೇಕಾಗುತ್ತದೆ.                           

PSI ಹುದ್ದೆ ಹಗರಣದ ಪಿತಾಮಹ ಸಿಎಂ ಬೊಮ್ಮಾಯಿ ಎಂದ ಡಿಕೆಶಿ! ಎಚ್​ಡಿಕೆ ಹೇಳಿದ ಆ ಮೂಲ ಕಿಂಗ್​ಪಿನ್​ ಯಾರು?

‘ವಿಕ್ರಾಂತ್ ರೋಣ’ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ. ಹಾಗಾಗಿ ಇಂಗ್ಲೀಷ್, ಜರ್ಮನ್, ರಷ್ಯನ್ ಭಾಷೆಗಳಲ್ಲಿ ‘ವಿಕ್ರಾಂತ್ ರೋಣ’ ಹೇಗೆ ಅಬ್ಬರಿಸಲಿದ್ದಾನೆ ಎನ್ನುವ ಕುತೂಹಲ ಹುಟ್ಟುಕೊಂಡಿದೆ. ಇನ್ನು ಚಿತ್ರದ ಬಾಕ್ಸಾಫೀಸ್ ನಂಬರ್‌ಗಳು, ಗಳಿಕೆ ಮಾತ್ರ ಇತಿಹಾಸ ಆಗುವುದಿಲ್ಲ. ಹಾಗಾಗಿ ‘ವಿಕ್ರಾಂತ್ ರೋಣ’ ಚಿತ್ರದ ಕೆಲವು ಹೊಸ ಪ್ರಯತ್ನಗಳು ಕೂಡ ಇತಿಹಾಸವಾಗಿ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap