ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಬರೆದ ‘ಕೆಜಿಎಫ್ ಚಾಪ್ಟರ್ 2’.. ಫಸ್ಟ್ ಡೇ ಕಲೆಕ್ಷನ್‌ ಏಷ್ಟು  ಕೋಟಿ ?

KGF 2 :

ಗುರುವಾರ ಬಿಡುಗಡೆಯಾದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಇತಿಹಾಸ ಸೃಷ್ಟಿಸಿದೆ. ಯಶ್‌ ನಟನೆಯ ಈ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ರೂ.185 ಕೋಟಿಗೂ ಅಧಿಕ ಕಲೆಕ್ಷನ್‌ ದಾಖಲಿಸಿದೆ.ಕನ್ನಡ ಚಿತ್ರರಂಗವಲ್ಲದೇ ಇಡೀ ವಿಶ್ವಾದ್ಯಂತ ಕ್ರೇಜ್ ಹುಟ್ಟಿಸಿದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ,‌ ನಿನ್ನೆ (ಗುರುವಾರ) 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು.

ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆದಿದೆ.ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ವಿದೇಶಿ ಪ್ರೇಕ್ಷಕರಿಂದ ಕೂಡ ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಹೊಂದಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೊದಲ ದಿನದ, ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಅನ್ನೋದು ಅಭಿಮಾನಿಗಳು ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಕೂತೂಹಲ ಕೆರಳಿಸಿದೆ.

ಕಾಂಗ್ರೆಸ್ ಅವರು ತನಿಖಾಧಿಕಾರಿಗಳಾಗಬೇಕಿಲ್ಲ: ಮುಕ್ತ ತನಿಖೆಯಾಗಲು ಬಿಡಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಿನಿಮಾದ ಫಸ್ಟ್ ಡೇ ಕಲೆಕ್ಷನ್‌ ಕೇಳಿದ್ರೆ, ನಿಜಕ್ಕೂ ದಾಖಲೆ ಸರಿ. ಸಿನಿಮಾ‌ ಪಂಡಿತರ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾ ತನ್ನ ಹಿಂದಿನ ಕೆಜಿಎಫ್ ಕಲೆಕ್ಷನ್‌ ಬ್ರೇಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಕೆಜಿಎಫ್ ಸಿನಿಮಾ ಬಿಡುಗಡೆ ಆದಾಗ ವಿಶ್ವಾದ್ಯಂತ 100 ಕೋಟಿ ಕಲೆಕ್ಷನ್‌ ಮಾಡಿತ್ತು. ಆದರೆ, ಕೆಜಿಎಫ್ ಚಾಪ್ಟರ್ 2 ಈ ದಾಖಲೆಯನ್ನ ತಾನೇ ಮುರಿದು ವಿಶ್ವಾದ್ಯಂತ ಬರೋಬ್ಬರಿ ರೂ.185 ಕೋಟಿ ಕಲೆಕ್ಷನ್‌ ಮಾಡುವ ಮೂಲಕ, ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ ಎಂಬುದು ಸಿನಿಮಾ ಪಂಡಿತರು ಹೇಳುವ ಮಾತು.

185 ಕೋಟಿ ಕಲೆಕ್ಷನ್‌ : ಕೆಜಿಎಫ್ ಚಾಪ್ಟರ್ 2 ಸಿನಿಮಾ, ಫಸ್ಟ್ ಡೇ 185 ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ಮೂಲಕ ಮೈಲಿಗಲ್ಲು ಸಾಧಿಸಿದೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ 4 ರಿಂದ 5 ಶೋ ಪ್ರದರ್ಶನಗೊಳ್ಳುವ ಮೂಲಕ ಹೌಸ್‌ಪುಲ್ ಆಗಿದೆ.

ಕರ್ನಾಟಕದಲ್ಲಿ ಏ. 18ರವರೆಗೆ ಕರ್ನಾಟಕದಲ್ಲಿ ಮಳೆ; ಕರಾವಳಿಯಲ್ಲಿ ಆರೆಂಜ್ ಅಲರ್ಟ್​ ಘೋಷಣೆ

ಮತ್ತೊಂದೆಡೆ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ ಜಾಸ್ತಿ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆ ಸೇರಿದಂತೆ ಭಾರತ ಅಲ್ಲದೇ ಅಮೆರಿಕಾ, ಕೆನಡಾ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆಯಾಗಿತ್ತು. ಇದೆನೆಲ್ಲಾ ಲೆಕ್ಕ ಹಾಕಿದರೆ, ವಿಶ್ವಾದ್ಯಂತ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಒಟ್ಟು ಕಲೆಕ್ಷನ್‌ 185 ಕೋಟಿ, ಇದರಲ್ಲಿ 35 ಕೋಟಿ ಚಿತ್ರಮಂದಿರಗಳ ಬಾಡಿಗೆ ತೆಗೆದರೆ, 150 ಕೋಟಿ ನೆಟ್ ಪ್ರಾಪ್ರಿಟ್ ಎನ್ನಲಾಗುತ್ತಿದೆ.

ಹೊಸ ದಾಖಲೆ : ಕರ್ನಾಟಕದಲ್ಲಿಯೇ ಕೆಜಿಎಫ್ ಚಾಪ್ಟರ್ 2 ಸಿನಿಮಾ, ಫಸ್ಟ್ ಡೇ, ಬರೋಬ್ಬರಿ 35 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಸೇರಿದರೆ 3000ಕ್ಕೂ ಸ್ಕ್ರೀನ್​​ಗಳಲ್ಲಿ ಶೋ ಪ್ರದರ್ಶನ ಆಗಿದೆ. ಇದು ಕನ್ನಡ ಚಿತ್ರರಂಗದ ಹೊಸ ದಾಖಲೆ ಎನ್ನಬಹುದು. ಇನ್ನು ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಬರೋಬ್ಬರಿ 150 ಕೋಟಿ ರೂ.ಸಂಗ್ರಹಿಸಿದೆ.

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ : ಈಶ್ವರಪ್ಪರನ್ನು ಬಂಧಿಸುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಹಿಂದಿಯಲ್ಲಿ ಬರೋರಿ 4 ಸಾವಿರ ಚಿತ್ರಮಂದಿರಗಳಲ್ಲಿ ತೆಲುಗು, ತಮಿಳು, ಮಲೆಯಾಳಂನಲ್ಲಿ 1500 ಚಿತ್ರಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗಿತ್ತು. ಈ‌ ಲೆಕ್ಕಾಚಾರದ ಮೇಲೆ ಈ ನಾಲ್ಕು ಭಾಷೆಯ 150 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಭಾರತ ಮಾತ್ರವಲ್ಲದೇ, ಅಮೆರಿಕಾ, ಕೆನಡಾ, ರಷ್ಯಾ, ಸೇರಿದಂತೆ ಹಲವು ವಿದೇಶಗಳಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗಿತ್ತು.

ಅಲ್ಲಿ ಕೂಡ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನಗೊಳ್ಳುವ ಮೂಲಕ 30 ಲಕ್ಷ ರೂಪಾಯಿ ಕಲೆಕ್ಷನ್‌ ಮಾಡಿದೆ ಅಂತಾ ಹೇಳಲಾಗುತ್ತಿದೆ. ಈ ಮೂಲಕ ವಿಶ್ವಾದ್ಯಂತ, ಕೆಜಿಎಫ್ ಚಾಪ್ಟರ್ 2 ಸಿನಿಮಾ, ಮೊದಲ ದಿನ 185 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿದೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ಹೃದಯಾಘಾತವಾಗಿ ನಿಧನ

ಆದರೆ, ಕೆಜಿಎಫ್ ಚಾಪ್ಟರ್ 2 ಸಿನಿಮಾದ, ಮೊದಲ ದಿನದ ಕಲೆಕ್ಷನ್‌ ಎಷ್ಟು ಎಂಬುವುದನ್ನು ‘ಹೊಂಬಾಳೆ ಫಿಲ್ಮ್ಸ್’ ಅಧಿಕೃತವಾಗಿ ಹೇಳಿಲ್ಲ. ಯಾಕೆಂದರೆ, ಈವರೆಗೂ ಹೊಂಬಾಳೆ ಫಿಲ್ಮ್ಸ್‌ನಲ್ಲಿ ನಿರ್ಮಾಣ ಆದ ಸಿನಿಮಾಗಳ ಕಲೆಕ್ಷನ್‌ ಎಷ್ಟು ಅನ್ನೋದನ್ನ ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೊದಲ ದಿನ ಗಲ್ಲಾ ಪೆಟ್ಟಿಗೆಯಲ್ಲಿ ಇತಿಹಾಸ ಸೃಷ್ಟಿಸಿದೆ. ಇನ್ನು ಮೂರು ದಿನ ರಜೆ ಇರುವ ಕಾರಣ, ಮೂರು ದಿನದಲ್ಲಿ 150 ರಿಂದ 200 ಕೋಟಿ ಕಲೆಕ್ಷನ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap