ಮುಂದಿನ ಪೀಳಿಗೆಗಾಗಿ ಗೋಮಾಳ ಸಂರಕ್ಷಣೆ

ಕೊಡಿಗೇನಹಳ್ಳಿ : 

      ಸರ್ಕಾರಿ ಭೂ ಒತ್ತುವರಿ ಮಾಡುವುದು ಅಪರಾಧ. ಸರ್ಕಾರಿ ಗೋಮಾಳವನ್ನೂ ಸಹ ಮುಂದಿನ ಪೀಳಿಗೆಗಾಗಿ ಸಂರಕ್ಷಣೆ ಮಾಡಬೇಕಾಗಿದೆ. ಹೀಗೆ ತಾವು ಮುಂದುವರೆದರೆ ತಮ್ಮ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಕಂದಾಯ ತನಿಖಾಧಿಕಾರಿ ನಾಗರಾಜು ಒತ್ತುವರಿದಾರರಿಗೆ ಕಡಖ್ ಸೂಚನೆ ನೀಡಿದರು.

      ಕೊಡಿಗೇನಹಳ್ಳಿ ಗ್ರಾಮದ ಗೋಪಾಲಕರು ಮತ್ತು ಉಪ ಕಸುಬು ನಂಬಿರುವ ಕುರಿ, ಮೇಕೆ ಸಾಕಾಣಿಕೆದಾರರು ಸರ್ವೆ ನಂ, 161, 162, 170 ರಲ್ಲಿನ ಗೋಮಾಳ ಸಂರಕ್ಷಣೆಗೆ ರಾಜಪಾಲರು, ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಹಾಗೂ ಉಪತಹಸೀಲ್ದಾರ್‍ರವರಿಗೆ 20 ಜುಲೈ 2020 ರಲ್ಲಿ ಮನವಿ ಸಲ್ಲಿಸಿದ್ದರು. ಈ ಮೇರೆಗೆ ಹಾಗೂ ಮತ್ತೊಮ್ಮೆ ಅರ್ಜಿ ಬಂದಿರುವ ಪರಿಣಾಮ ಗೋಮಾಳ-ಸಾಮಾಜಿಕ ಅರಣ್ಯ ಪ್ರದೇಶದ ಅರಣ್ಯ ರಕ್ಷಕ ಸೋಮಪ್ಪ ಡಿ ವಿಂಗ್ ನಮ್ಮ ಮೇಲಿನ ಅಧಿಕಾರಿಗಳ ಆದೇಶದಂತೆ ಬಂದಿರುವುದಾಗಿ ತಿಳಿಸಿದರು. ಅತಿಕ್ರಮ ಪವೇಶ ಮಾಡಿರುವವರ ನಡುವೆ ವಾದ-ಪ್ರತಿವಾದಗಳು ನಡೆದವು. ಸ್ಥಳಕ್ಕೆ ದಾವಿಸಿದ ಉಪತಹಸೀಲ್ದಾರ್ ಮತ್ತು ಕಂದಾಯ ತನಿಖಾಧಿಕಾರಿ ನಾಗರಾಜು ಕೇವಲ ಅರ್ಜಿ ಸಲ್ಲಿಸದಾಕ್ಷಣ ಭೂ ಮಂಜೂರು ಅಲ್ಲ. ಸರ್ಕಾರ ಮಂಜೂರು ಮಾಡಬೇಕಾಗಿದೆ. ಅಲ್ಲಿಯವರೆಗೂ ಅತಿಕ್ರಮ ಪ್ರವೇಶ ಬೇಡ ಎಂದು ತಿಳಿಸಿದರು. ತನಿಖಾಧಿಕಾರಿಗಳಿಗೆ ಸಾರ್ವಜನಿಕರು ಸರ್ಕಾರವು ಅಕ್ರಮ ಸಕ್ರಮ ಮಾಡುವುದಾಗಿ ನಮೂನೆ 50 ರಲ್ಲಿ ಅರ್ಜಿ ಪಡೆದಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.

      ಸರ್ಕಾರಿ ಜಮೀನು, ಗೋಮಾಳ, ಅರಣ್ಯ ಪ್ರದೇಶ ಇವುಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕಾಗಿದೆ. ಯಾವುದೇ ರೀತಿಯ ಸರ್ಕಾರಿ ಜಮೀನು ಒತ್ತುವರಿಯನ್ನು ಸಹಿಸುವುದಿಲ್ಲ. ಇಂದಿನಿಂದ ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ವಾಸುದೇವಮೂರ್ತಿ ತಿಳಿಸಿದರು.

       ಪ್ರಾಚೀನ ಕಾಲದಲ್ಲಿ ಪ್ರತಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಾಗೆ ರೈತರಿಗೆ ಮತ್ತು ಪ್ರಾಣಿ ಸಂಕುಲಗಳಿಗೆ ಅನುಕೂಲವಾಗಲು ರಾಜ ಮಹಾರಾಜರು ಗೋಮಾಳ, ಗುಂಡು ತೋಪು, ಮಹಲ್‍ಗಳನ್ನು ಮತ್ತು ಕೆರೆ ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಅನೇಕ ದಾನಿಗಳು ಗೋ ಮತ್ತು ಗೋಮಾಳಗಳನ್ನು ದಾನವಾಗಿ ನೀಡಿ, ಗೋ ಸಂತತಿಯನ್ನು ಸಂರಕ್ಷಣೆ ಮಾಡಲು ಹೆಚ್ಚು ಒತ್ತು ಕೊಡುತ್ತಿದ್ದರು. ಹಾಗೆಯೆ ಕೊಡಿಗೇನಹಳ್ಳಿ ಗೋಮಾಳದಲ್ಲಿ ಅನೇಕ ವರ್ಷಗಳಿಂದ ಅರಣ್ಯ ಇಲಾಖೆಯು ಮರ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಿಕೊಂಡು ಬಂದಿದೆ.

      ಈ ಅರಣ್ಯದಲ್ಲಿ ಕೃಷ್ಣ ಮೃಗಗಳು ಮತ್ತು ನವಿಲುಗಳ ಸಂತತಿ ಬೆಳೆಯುತ್ತಿದೆ. ಸುತ್ತಮುತ್ತಲಿನ ಕೊಡಿಗೇನಹಳ್ಳಿ, ಜಾಲಿಹಳ್ಳಿ, ಗುಟ್ಟೆ, ಸಿಂಗನಹಳ್ಳಿ, ಮೌಲಾಬೇಗ್‍ಪಾಳ್ಯ, ತೆರಿಯೂರು, ಹೊಸಹಳ್ಳಿ, ಗುಂಡಗಲ್ಲು, ಬೂಚೇನಹಳ್ಳಿ ವಾಸಿಗಳು ಮತ್ತು ಚದುರಿದ ಅಡಲುವಾಸಿಗಳು ಇದೇ ಗೋಮಾಳವನ್ನು ನಂಬಿಕೊಂಡು ಹೈನುಗಾರಿಕೆ ಮತ್ತು ಕುರಿ, ಮೇಕೆಗಳ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಇದು ಇಲ್ಲವಂತಾದರೆ ಉಪ ಕಸುಬು ನಂಬಿ ಜೀವನ ಸಾಗಿಸುವುದು ಹೇಗೆ? ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಗೋಮಾಳಗಳ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿರುವ ಪರಿಣಾಮ ಇಲ್ಲಿನ ಕೃಷ್ಣಮೃಗಗಳ ಸಂತತಿ ಮತ್ತು ನವಿಲುಗಳ ಸಂತತಿ ಮತ್ತು ಈ ಅರಣ್ಯ ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳ ಸಂತತಿ ನಾಶವಾಗುತ್ತಿದೆ. ಸಂರಕ್ಷಿಸಬೇಕು ಎಂದು ಗೋಪಾಲಕರು ಮತ್ತು ಕುರಿ, ಮೇಕೆ ಸಾಕಾಣಿಕೆದಾರರು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link