ಜಾತಿ, ಮಠಗಳಿಗೆ ಕೋಟಿಗಟ್ಟಲೇ ಕೊಡ್ತಿರಿ, ನೌಕರರಿಗೇಕಿಲ್ಲ – ಕೋಡಿಹಳ್ಳಿ ಚಂದ್ರಶೇಖರ್

 ತುಮಕೂರು :

      6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಬೇಕೆಂದು ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿರುವ ಸಾರಿಗೆ ನೌಕರರಿಗೆ ಪೂರ್ಣ ವೇತನ ಕೊಡಲು ಸರಕಾರ ಅನುದಾನದ ಕೊರತೆ ಎನ್ನುತ್ತಿದೆ. ಆದರೆ ಜಾತಿ ಮಂಡಳಿ, ಪ್ರಾಧಿಕಾರ, ಮಠಗಳಿಗೆ ಕೋಟಿಗಟ್ಟಲೇ ಕೊಡಲು ಹಣ ಎಲ್ಲಿದೆ. ಮೊದಲು ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಅಲ್ಲಿಯವರೆಗೂ ನೌಕರರ ಮುಷ್ಕರ ನಿಲ್ಲದು ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

     ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾಧ್ಯಂತ 1 ಲಕ್ಷ 34 ಸಾವಿರದಷ್ಟಿರುವ ಸಾರಿಗೆ ನೌಕರರು ಅರ್ಧ ಸಂಭಳಕ್ಕೆ ದುಡಿಯುತ್ತಿದ್ದು, ಡಿಸೆಂಬರ್‍ನಲ್ಲಿ ಮುಷ್ಕರ ಹೂಡಿದ ಸಂದರ್ಭದಲ್ಲಿ 6ನೇ ವೇತನ ಆಯೋಗದ ಭರವಸೆ ನೀಡಿ ಮುಷ್ಕರ ಹಿಂಪಡೆಯಲಾಗಿತ್ತು. ಆದರೆ ಸಾರಿಗೆ ಸಚಿವರು ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಶೇ.8ರಷ್ಟು ಮಾತ್ರ ಹೆಚ್ಚಳ ಮಾಡಿದ್ದು ಸರಿಯೇ, ತಮಗೆ ಬೇಕಾದವರಿಗೆ ಬೇಕಾದಷ್ಟು ಕೋಟಿ ಹಂಚಿಕೆಮಾಡುವ ಸರಕಾರಕ್ಕೆ ದುಡಿಯುವ ವರ್ಗಕ್ಕೆ ಬೊಕ್ಕಸದಲ್ಲಿ 700ಕೋಟಿ ತೆಗೆದಿಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. 

ಚಳವಳಿ ಹತ್ತಿಕ್ಕಲ್ಲು ಇನ್ನಿಲ್ಲದ ಪ್ರಯತ್ನ:

      ಒಂದು ಚಳವಳಿಯನ್ನು ಹತ್ತಿಕ್ಕಲು ಸರಕಾರ ತನ್ನ ಎಲ್ಲಾ ಶಕ್ತಿಮೀರಿ, ಬಸ್ ಆಪರೇಟ್ ಮಾಡಲು ಬಸ್ ಓಡಿಸಲು, ಪರ್ಯಾಯ ಬೇರೆ ಬಸ್‍ಗಳನ್ನು ಬಿಡಲು ಪ್ರಯತ್ನ ಮಾಡುತ್ತಿದ್ದಾರೆ. ಅದು ಎಷ್ಟು ಫಲಪ್ರದಕಾರಿಯಾಗುವುದೋ ಗೊತ್ತಿಲ್ಲ. ಸರಕಾರ ವಿಫಲರಾಗಲಿದ್ದು ನೌಕರರಿಗೆ ನ್ಯಾಯವನ್ನು ಕೊಡುವ ಬದಲು ದಮನಕಾರಿ ಪ್ರಯತ್ನ ಸರಿಯಲ್ಲ. ಕೊರೊನಾ ಹಣವಿಲ್ಲ ಸಂಸ್ಥೆ ಲಾಭದಲ್ಲಿಲ್ಲ ಎನ್ನುತ್ತಿದ್ದಾರೆ. ಸೇವಾ ವಲಯದ ರಸ್ತೆ ಸಾರಿಗೆ ನಿಗಮಗಳು ಯಾವ ವರ್ಷ ಲಾಭದಲ್ಲಿದ್ದವು ತಿಳಿಸಲಿ. ನೌಕರರಿಗೆ ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಎಸ್ಮಾ ಜಾರಿಗೆ ಹೆದರವುದಿಲ್ಲ. ನಮಗೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸಿ ಎಂದು ಕೇಳಿದ್ದಕ್ಕೆ ಎಸ್ಮಾ ಜಾರಿ ಮಾಡುತ್ತಾರೆಯೇ ಎಂದು ತಿರುಗೇಟು ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link