ಸಹಾಯ ಮಾಡುವ ಕೈ ಬರಿದಾಗದು

ಕೊರಟಗೆರೆ:

      ಬಡವರು, ನಿರ್ಗತಿಕರ ಕಷ್ಟಗಳನ್ನು ಅರಿತು ಸಹಾಯ ಮಾಡುವÀ ಕೈ ಎಂದೂ ಬರಿದಾಗುವುದಿಲ್ಲ. ದೇಶದಲ್ಲಿ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಒಳಗಾಗಿ ಬಡತನದಲ್ಲಿ ಇರುವವವರಿಗೆ ಕಾಣದ ಕೈಗಳು ಇವತ್ತಿಗೂ ಸಹಾಯ ಮಾಡುತ್ತಿವೆ ಎಂದು ಸಿದ್ದರಬೆಟ್ಟ ಬಾಳೆ ಹೊನ್ನೂರು ಖಾಸಾಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

      ಅವರು ಹೊಳವನಹಳ್ಳಿ ಹೋಬಳಿಯ ತುಂಬಗಾನಹಳ್ಳಿ, ತೀತಾ, ವೀರಯ್ಯನಪಾಳ್ಯ ಹಾಗೂ ಬುಡಮಾರನಹಳ್ಳಿ ಗ್ರಾಮಗಳಲ್ಲಿ ಕೊರೋನಾ ವೈರಸ್‍ನಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ 200ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಬೆಂಗಳೂರು ಲ್ಯಾಂಡರ್ಸ್ ಫೌಂಡೇಷನ್ ವತಿಯಿಂದ ದಿನಸಿ ಆಹಾರದ ಕಿಟ್‍ಗಳು ಮತ್ತು ಮಾಸ್ಕ್‍ಗಳನ್ನು ವಿತರಿಸಿ ಮಾತನಾಡಿದರು.

      ಲಾಕ್‍ಡೌನ್‍ನಿಂದ ಕೂಲಿ ಕಾರ್ಮಿಕರು, ರೈತರು, ಬೀದಿಬದಿ ವ್ಯಾಪಾರಿಗಳು, ಮಧ್ಯಮ ವರ್ಗದವರು ಸೇರಿದಂತೆ ಅನೇಕರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಷ್ಟದ ಸಮಯದಲ್ಲಿ ಯಾರು ಸಹಾಯ ಮಾಡುತ್ತಾರೊ ಅವರ ಕೊಡುವ ಕೈ ಬರಿದಾಗಬಾರದು ಎಂದು ಆ ದೇವರು ಎಂದೂ ಕೈ ಬಿಡುವುದಿಲ್ಲ ಎಂದು ಹೇಳಿದರು.

      ಲ್ಯಾಂಡರ್ಸ್ ಫೌಂಡೇಷನ್ ವತಿಯಿಂದ ಡಾ.ಲೋಕೆಶ್ ಮತ್ತು ಅವರ ಕುಟುಂಬದವರು ಬಡ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡಿ ಪ್ರತಿ ಕುಟುಂಬಗಳಿಗೆ ಹಸಿವನ್ನು ತಣಿಸುತ್ತಿರುವುದು ಶ್ಲಾಘನೀಯ ಎಂದ ಶ್ರೀಗಳು, ಸಾಮಾಜಿಕ ಅಂತರ ಕಾಯ್ದಕೊಳ್ಳುವ ಮೂಲಕ ಮಹಾಮಾರಿ ಕೊರೋನಾ ವಿರುದ್ದ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಮಾಸ್ಕ್ ಧರಿಸುವುದು ಮತ್ತು ಸೋಪ್ ಬಳಸಿ ಕೈಗಳನ್ನು ಶುಭ್ರವಾಗಿ ತೊಳೆಯುತ್ತಿರಬೇಕು ಹಾಗೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ತಿಳಿಸಿದರು.

      ಲ್ಯಾಂಡರ್ಸ್ ಫೌಂಡೇಷನ್‍ನ ಡಾ.ಲೊಕೇಶ್ ಮಾತನಾಡಿ, ಕೊರೋನಾ ರೋಗದಿಂದ ಮುಕ್ತರಾಗಬೇಕೆಂದರೆ ಮನೆಯಲ್ಲಿಯೇ ಇರುವುದು, ಶುಚಿತ್ವದಿಂದ ಇರುವುದೇ ಆಗಿದೆ. ಲಾಕ್ ಡೌನ್‍ನಿಂದ ಕೂಲಿ ನಾಲಿ ಮಾಡಿ ಬದುಕುತಿದ್ದ ಗ್ರಾಮೀಣ ಜನರಿಗೆ ಸಂಕಷ್ಟ ಎದುರಾಗಿದೆ. ನಮ್ಮ ಫೌಂಡೇಷನ್‍ನಿಂದ 200 ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ನೀಡುತ್ತಿದ್ದೇವೆ. ಮೇ. 17ರ ನಂತರ ಪ್ರಧಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿ ದೇಶದಿಂದ ಕೊರೋನಾ ನಿರ್ಮೂಲನೆ ಮಾಡಲು ಸಹಕರಿಸೊಣ ಎಂದರು.

      ಈ ಸಂದರ್ಭದಲ್ಲಿ ಚೈತ್ರಲೊಕೇಶ್, ತೀತಾಜಗದೀಶ್, ಪರ್ವತಯ್ಯ, ಪ್ರಕಾಶ್‍ಕುಮಾರ್, ತೀತಾ ಪಿಡಿಓ ರಮೇಶ್, ಗಾ.್ರಪಂ.ಅಧ್ಯಕ್ಷೆ ಮಂಜುಳಾ, ವೆಂಕಟೇಶ್, ಕೋಡ್ಲಹಳ್ಳಿ ಚಂದ್ರಣ್ಣ, ಸಿದ್ದಲಿಂಗಪ್ಪ, ಚಿದಾನಂದ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap