ಎಂ ಎನ್ ಕೋಟೆ
ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ವರಮಹಾಲಕ್ಷ್ಮೀ ಹಬ್ಬ ಮಾಡಲು ಸಾರ್ವಜನಿಕರು ಮುಂದಾಗಿದ್ದಾರೆ.ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆಯಲ್ಲಿ ಗುರುವಾರ ಹಬ್ಬ ಮಾಡಲು ಹೂ , ಹಣ್ಣು ತೆಗೆದುಕೊಳಲು ಸಾರ್ವಜನಿಕರು ಮುಗಿ ಬೀಳುತ್ತಿದ್ದಾರೆ. ಹೂ, ಹಣ್ಣು 150 ರಿಂದ 200 ರೂ ದುಬಾರಿಯಾದರು ಜನ ಕರೋನಾ ನಡುವೆಯೂ ಹೂವು ಖರೀಧಿ ಮಾಡುತ್ತಿದ್ದಾರೆ. ಒಂದು ಕಡೆ ಹೂ ಹಣ್ಣು ಗಗನಕ್ಕೇರಿದ್ದರೂ ಸಹ ಹಬ್ಬ ಮಾಡಲು ಜನ ತಿರ್ಮಾನಿಸಿದ್ದಾರೆ. ಇನ್ನೋಂದು ಕಡೆ ಕರೋನಾ ನಡುವೆಯೂ ಸಹ ಹಬ್ಬ ಮಾಡಲು ಜನ ಸಜ್ಜಾಗಿದ್ದಾರೆ.
ಹಬ್ಬದ ಪ್ರಯುಕ್ತ ಗ್ರಾಹಕರು ಮಾಸ್ಕ್ ಧರಿಸಿ ಹೂ ಹಣ್ಣುಗಳನ್ನು ಖರೀಧಿ ಮಾಡುವ ದೃಶ್ಯ ಕಂಡು ಬಂತು. ಕರೋನಾ ಹಿನ್ನಲೇಯಲ್ಲಿ ಜನ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲು ಸಿದ್ದರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
