ಕೊರಟಗೆರೆ : ಅಂತಾರಾಜ್ಯ ಸರಗಳ್ಳರ ಬಂಧನ!

ಕೊರಟಗೆರೆ :

      ಮಹಿಳೆಯರ ಕೊರಳಿನ ಚಿನ್ನದ ಸರಗಳನ್ನು ಕಿತ್ತುಕೊಂಡು ಸಿನಿಮೀಯ ರೀತಿಯಲ್ಲಿ ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ಖದೀಮರನ್ನು ಕೊರಟಗೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಕೊರಟಗೆರೆ ಪಟ್ಟಣದಲ್ಲಿ ಮತ್ತೊಂದು ಪ್ರಕರಣಕ್ಕೆ ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡು ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆಗೊಳಪಡಿಸಿದಾಗ ಕೆಲವೊಂದು ಪ್ರಕರಣಗಳು ಹೊರಬಿದ್ದಿವೆ. ಆರೋಪಿಗಳು ಮಡಕಶಿರಾ ತಾಲ್ಲೂಕು ಏರೆಬಮ್ಮನಹಳ್ಳಿ ಗ್ರಾಮದ ಶಿವಣ್ಣ (25) ಹಾಗೂ ನಾಗಯ್ಯ (26) ಎಂದು ಗುರುತಿಸಲಾಗಿದ್ದು, ಇವರು ಕೊರಟಗೆರೆ ತಾಲ್ಲೂಕಿನ ದಾಸರಹಳ್ಳಿ ಬಳಿ ಹಾಗೂ ಮಧುಗಿರಿ ತಾಲ್ಲೂಕಿನ 2 ಕಡೆ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

      ಆರೋಪಿಗಳನ್ನ ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ್ದ 2 ಬೈಕ್ ಹಾಗೂ 150 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದು ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

      ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ನೇತೃತ್ವದಲ್ಲಿ ಪಿಎಸ್‍ಐ ನಾಗರಾಜು, ಸಿಬ್ಬಂದಿ ಮೋಹನ್, ನಾಗರಾಜು, ಗಂಗಾಧರ್, ಸೈಯದ್ ರಿಫಕ್ ಅಲಿ, ಸಿದ್ದಲಿಂಗಪ್ರಸನ್ನ, ಶಶಿಕುಮಾರ್, ಚಾಲಕ ನಜರ್ ವುಲ್ಲಾಖಾನ್ ಕಾರ್ಯಾಚರಣೆಯಲ್ಲಿ ಇದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link