ಕೊರಟಗೆರೆ :

ದ್ವೇಷದ ದಳ್ಳೂರಿಗೆ ವಯೋವೃದ್ಧರಿಗೆ ಆಸರೆಯಾಗಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ದಿನಸಿ ಸಾಮಾನುಗಳು ಸುಟ್ಟು ಭಸ್ಮ ಆಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ ಗ್ರಾಪಂ ವ್ಯಾಪ್ತಿಯ ಪಕ್ಕಿರಪ್ಪನಪಾಳ್ಯ ಮೇಗಲತಾಂಡದ ಖಂಡ್ಯನಾಯ್ಕ ಮತ್ತು ತುಳಸಿಬಾಯಿ ದಂಪತಿಗಳಿಗೆ ಜೀವನಾಧರವಾಗಿದ್ದ ಪೆಟ್ಟಿಗೆ ಅಂಗಡಿಗೆ ಮಧ್ಯರಾತ್ರಿ ಬೆಂಕಿ ಹಚ್ಚಿರುವ ಪರಿಣಾಮ ದಂಪತಿಗಳು ಬೀದಿಗೆ ಬರುವಂತಾಗಿದೆ.
ಹೊಸವರ್ಷದ ವ್ಯಾಪಾರಕ್ಕಾಗಿ ಪೆಟ್ಟಿಗೆ ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ದಿನಸಿ ಸಾಮಾನುಗಳು ಸುಟ್ಟು ಭಸ್ಮವಾಗಿವೆ. ವೃದ್ಧ ದಂಪತಿಗಳು ದಾರಿಕಾಣದೇ ಬೀದಿಗೆ ಬರುವಂತಾಗಿದ್ದು, ಕೊರಟಗೆರೆ ಠಾಣೆಯಲ್ಲಿ ಘಟನೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








