ಲಾಕ್ ಡೌನ್ ನಂತರ ಖಾಸಗಿ ಬಸ್ ಸಂಚಾರ ಆರಂಭ

ಹೆಬ್ಬೂರು

     ಕೊವಿಡ್ 19 ನಿಂದಾಗಿ ಮಾರ್ಚಿ ತಿಂಗಳಿನಲ್ಲಿ ಲಾಕ್ ಡೌನ್ ಜಾರಿಯಾದಾಗಿನಿಂದ ಸ್ಥಗಿತವಾಗಿದ್ದ ಖಾಸಗಿ ಬಸ್ ಸಂಚಾರ ಸೋಮವಾರದಿಂದ ಆರಂಭಿಸಲಾಯಿತು. ತುಮಕೂರು-ಕುಣಿಗಲ್ ಮಾರ್ಗದ ಮಧ್ಯೆ ಸುಮಾರು 12 ಖಾಸಗಿ ಬಸ್ ಸಂಚಾರ ಬೆಳ್ಳಗಿನಿಂದ ಆರಂಭವಾಗಿದ್ದು, ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಪ್ರಯಾಣ ಮಾಡಿದರು.

     ಬಸ್‍ನಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮತ್ತು ಸಾಮಾಜಿಕ ಅಂತರ ಕಡ್ಡಾಯ ಪಾಲನೆ ಮಾಡಲಾಯಿತು. ಸರ್ಕಾರಿ ಬಸ್ ಪ್ರಯಾಣ ದರ ಅಧಿಕವಾದ್ದರಿಂದ ಈ ಮಾರ್ಗದಲ್ಲಿ ಹೆಚ್ಚಿನ ಜನರು ಖಾಸಗಿ ಬಸ್ ಸಂಚಾರವನ್ನ ಅವಲಂಬಿಸಿದ್ದಾರೆ. ಬಸ್‍ನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರನ್ನ ಕರೆದೊಯ್ಯುವವರೆವಿಗೂ ಆರ್ಥಿಕ ನಷ್ಟವಾಗುತ್ತದೆಂದು ಬಸ್ ಮಾಲೀಕರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link