ಕೊರಟಗೆರೆ :
ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಲಲಿತಾ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಜ. 04 ರಂದು ಚೋಳರ ಕಾಲದ, ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ, ತುಮಕೂರು ಜಿಲ್ಲೆಯ ಮಧುಗಿರಿ ಸಮೀಪದ ಶೈವ ಮತ್ತು ವೈಷ್ಣವ ಪಂಥ ಹಾಗೂ ಜೈನ ಧರ್ಮದವರಿಂದ ಪೂಜಿಸಲ್ಪಡುವ ಹರಿಹರೇಶ್ವರ ಸ್ವಾಮಿಯ ದೇವಾಲಯವನ್ನು ಸ್ವಚ್ಛಗೊಳಿಸಲಾಯಿತು.
ಇದೇ ದಿನ ಕೊರಟಗೆರೆ ತಾಲ್ಲೂಕಿನ ಕಲ್ಕೆರೆ ಗ್ರಾಮದ ಕುಂಚಿಟಿಗ ಒಕ್ಕಲಿಗ ಸಮುದಾಯದ ಉಪ ಪಂಗಡ ಉಳ್ಳೆನವರು ಮತ್ತು ಜೀರಿಗೆನವರ ಮನೆ ದೇವರಾದ ಶ್ರೀ ಕೋಡಿ ರಂಗನಾಥ ಸ್ವಾಮಿ ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣಗಳನ್ನು ಸ್ವಚ್ಛ ಮಾಡಿ, ಮೂಲ ಸ್ವರೂಪಕ್ಕೆ ತರಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಕಲ್ಕೆರೆ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಮೋಹನ್ ಕುಮಾರ್ ಮತ್ತು ಕಾರ್ಯದರ್ಶಿ ರಾಜಣ್ಣ ಹಾಗೂ ಪರಿಸರ ಸಂರಕ್ಷಣಾ ವೇದಿಕೆಯ ಪ್ರಕಾಶ್, ಧನಂಜಯ, ರಘು ಸಮರ್ಥ, ಅಂಬುಜ ಗುಜ್ಜಾರಪ್ಪ, ಸತೀಶ್, ಮಹೇಶ್, ಗಿರೀಶ್, ರಮ್ಯ ರಾಘವೇಂದ್ರ, ಅನಸೂಯ, ಮಂಜುನಾಥ ಜಿ.ಆರ್., ಮಧುಕರ, ರಾಮಯ್ಯ, ರಾಕೇಶ್, ಶಿವರಾಂ, ವಿಜಯಕುಮಾರ್, ಅರ್ಚಕ ಶ್ರೀನಿವಾಸ ಮತ್ತು ಪುಟಾಣಿಗಳಾದ ಶಾನ್ವಿತ ಗೌಡ, ಕೃಷ್ಣ, ಮೋನಿಕ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ