ತುಮಕೂರು:
ಕೇಂದ್ರ ಪುರಸ್ಕೃತ ಯೋಜನೆ ಗಳ ಪ್ರಗತಿ ಪರಿಶೀಲನಾ ಸಭೆ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅಧ್ಯಕ್ಷ ತೆಯಲ್ಲಿ ಆಯೋಜಿತವಾಗಿದೆ.
ಸಭೆಯಲ್ಲಿ ಮಾತನಾಡಿ ದ ಸಹಕಾರ ಸಚಿವ ಕೆ. ಎನ್ ರಾಜಣ್ಣ ಅವರು ನಂದಿನಿ ಹೊರತುಪಡಿಸಿ ಉಳಿಕೆ ಖಾಸಗಿ ಪೂರೈಕೆ ಯಾಗುತ್ತಿರುವ ಹಾಲು ಕಲಬೆರಕೆಯಿಂದ ಕೂಡಿದ್ದು ಸ್ಲೋ ಪಾಯ್ಸನ್ ಅನ್ನು ಜನರಿಗೆ ವಿತರಿಸುತ್ತಿದ್ದಾರೆ.
ಈ ಬಗ್ಗೆ ಪಾಲಿಕೆ, ನಗರಸಭೆ ಅಧಿಕಾರಿಗಳು ಕ್ರಮವಹಿಸಿ ದಾಳಿ ನಡೆಸಬೇಕೆಂದು ಸೂಚಿಸಿದರು.
ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳು ಸರ್ಕಾರದ ಹಣದಲ್ಲಿ ನಡೆಯುತ್ತಿದ್ದು ಸರ್ಕಾರ ದ ಸ್ಕೀಂಗಳನ್ನು ಅನುಷ್ಠಾನ ಗೊಳಿಸುವಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಶಿರಾ ನಗರಸಭೆ ಆಯುಕ್ತ ರು ಸಭೆಗೆ ಗೈರಾಗಿ ಅಧೀನ ಅಧಿಕಾರಿಯನ್ನು ನಿಯೋಜಿಸಿರುವುದಕ್ಕೆ ಗರಂ ಆಗಿ ಅಧಿಕಾರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಗೆ ಸೂಚಿಸಿದರು.
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಯಾಗಿ ಘೋಷಣೆ ಯಾಗಿದ್ದು, 60:40ರ ಅನುಪಾತ ದಲ್ಲಿ ಕಾಮಗಾರಿ ಮುಂದುವರಿಸಲು ಪ್ರಸ್ತಾವನೆ ಕಳುಹಿಸುವಂತೆ ಸಚಿವ ನಾರಾಯಣ ಸ್ವಾಮಿ ಸಹಕಾರ ಸಚಿವರಲ್ಲಿ ಪ್ರಸ್ತಾಪಿಸಿದರು.
ಸಚಿವ ಕೆಎನ್ ಆರ್ ಅವರು ಈ ಸಂಬಂಧ ಬೆಂಗಳೂರಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.
ಪಾವಗಡಕ್ಕೆ ತುಂಗಾ ಹಿನ್ನಿರಿನಡಿ ನೀರೊದಗಿಸುವ ಯೋಜನೆ, ಎತ್ತಿನಹೊಳೆ, ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ ರೈಲು ಮಾರ್ಗ ಗಳ ಪ್ರಗತಿ ಮಾಹಿತಿ ಯನ್ನು ಸಚಿವರು ಅಧಿಕಾರಿಗಳಿಂದ ಪಡೆದರು. ಶಾಸಕ ಜ್ಯೋತಿ ಗಣೇಶ್, ಎಂಎಲ್ಸಿಗಳಾದ ಚಿದಾನಂದ ಗೌಡ, ಕೆ. ಎ. ತಿಪ್ಪೇಸ್ವಾಮಿ, ಮೇಯರ್ ಪ್ರಭಾವತಿ ಜಿಲ್ಲಾ ಧಿಕಾರಿ ಶ್ರೀ ನಿವಾಸ್, ಜಿಪಂ ಸಿಇಓ ಜಿ. ಪ್ರಭು, ಎಸ್ಪಿ ರಾಹುಲ್ ಕುಮಾರ್, ಆಯುಕ್ತೆ ಬಿ. ವಿ. ಅಶ್ವಿಜ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
