ಕೊರಟಗೆರೆ :
ಸ್ನೇಹಿತರ ಜೊತೆ ಆಟವಾಡುಯ್ಯಾ ಈಜಾಡಲು ಅಕ್ಕಿರಾಂಪುರ ಕೆರೆಗೆ ತೆರಳಿದ ಬಾಲಕರಿಬ್ಬರು ಕೊರಟಗೆರೆ ಪಿಡ್ಲ್ಯೂಡಿ ಇಲಾಖೆಯ ಗುತ್ತಿಗೆದಾರ ಕೆರೆ ಏರಿ ಕಾಮಗಾರಿಗೆ ಪರವಾನಗಿ ಇಲ್ಲದೇ ತೆಗೆದಿರುವ 60ಅಡಿ ಆಳದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೊರಟಗೆರೆತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರದಕೆರೆಯಲ್ಲಿ ಹೊಸಹಳ್ಳಿ ಗ್ರಾಮದ ರಮೇಶ ಎಂಬುವರ ಮಗನಾದ ಸತೀಶ(15) ಮತ್ತು ಹನುಮಂತರಾಯಪ್ಪನ ಮಗನಾದ ನಂದನಕುಮಾರ್(16) ಈಜಾಡಲು ಬರದೇಕೆರೆಯಲ್ಲಿನ ಆಳವಾದ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ದುರ್ಧೈವಿ ಆಗಿದ್ದಾರೆ.
ಹೊಸಹಳ್ಳಿ ಗ್ರಾಮದ ಸತೀಶ, ನಂದನ, ಆಕಾಶ್, ಸಂತೋಷ, ಮಧುಸೂದನ ಎಂಬ ಐದುಜನ ಸ್ನೇಹಿತರುಈಜಾಡಲು ತೆರಳಿದ್ದಾರೆ. ಸತೀಶ ಆಳವಾದ ನೀರಿನಲ್ಲಿಈಜಾಡಲು ಹೋಗಿ ಮುಳುಗಿರುವ ವೇಳೆ ಕಾಪಾಡಲು ಪ್ರಯತ್ನಿಸಿದ ನಂದನ ಕೂಡ ದಡದಿಂದ ಜಾರಿ ಮುಳುಗಿದ್ದಾನೆ. ಇಬ್ಬರನ್ನು ರಕ್ಷಿಸಲು ತೆರಳುತ್ತಿದ್ದ ಸಂತೋಷನನ್ನು ಆಕಾಶ್ ಹಿಂದಕ್ಕೆ ಎಳೆದು ತಮ್ಮನ ಪ್ರಾಣವನ್ನುರಕ್ಷಣೆ ಮಾಡಿದ್ದಾನೆ.
ಪಿಡ್ಲ್ಯೂಡಿ ಇಲಾಖೆ ವಿರುದ್ಧ ಆಕ್ರೋಶ.
ಅಕ್ಕಿರಾಂಪುರ ಕೆರೆ ಏರಿಯ ರಸ್ತೆ ಕಾಮಗಾರಿ ನಡೆದಾಗ ಯಾವುದೇಇಲಾಖೆಯಿಂದ ಪರವಾನಗಿ ಪಡೆಯದೇಕೆರೆಯಲ್ಲಿ 20ಕ್ಕೂ ಹೆಚ್ಚು 40ಅಡಿ ಆಳದ ಗುಂಡಿಗಳನ್ನು ತೆಗೆದಿದ್ದಾರೆ. ಆಳವಾದ ಗುಂಡಿಯಲ್ಲಿ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಗುಂಡಿ ಮುಚ್ಚುವಂತೆ ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಮಾಡಿದರೂ ನಿರ್ಲಕ್ಷ ವಹಿಸಿರುವ ಪರಿಣಾಮ ಯುವಕರು ಈಜಾಡಲು ತೆರಳಿ ಮೃತಪಟ್ಟಿದ್ದಾರೆಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಯುವಕರಕುಟುಂಬಕ್ಕೆ ಪರಿಹಾ ನೀಡುವಂತೆ ಒತ್ತಾಯ ಮಾಡಿದರು.
ಕಾರ್ಯಚರಣೆ ವೇಳೆ ನಂದನಕುಮಾರ್ ಮೃತದೇಹ ದೊರಕಿದೆ. ಇನ್ನೂಳಿದ ಸತೀಶನ ಮೃತದೇಹಕ್ಕಾಗಿ ಸ್ಥಳೀಯ ರಾಮಾಂಜಿ ಮತ್ತುರಾಕೇಶ್‍ನಿಂದ ಹುಡುಕಾಟ ನಡೆದಿದೆ. ಸ್ಥಳದಲ್ಲಿಯೇ ಕೊರಟಗೆರೆ ಪೊಲೀಸ್‍ಠಾಣೆಯ ಸಿಪಿಐ ನಧಾಪ್, ಪಿಎಸೈ ಮುತ್ತುರಾಜು, ಎಎಸೈ ಯೊಗೀಶ್ ಮತ್ತು ಅಗ್ನಿಶಾಮಕಠಾಣೆಯ ಸಿಬ್ಬಂದಿ ವರ್ಗ ಮೊಕ್ಕಾಂ ಹೋಡಿದ್ದಾರೆ. ಕೊರಟಗೆರೆ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ