ಕೊರಟಗೆರೆ :
ಒಂಟಿ ಮಹಿಳೆಯ ಕುತ್ತಿಗೆಗೆ ಸೀರೆಯಿಂದ ಬಿಗಿದು ಕೊಲೆ ಮಾಡಿ ಆಭರಣ ದೋಚಿದ್ದ ಕಳ್ಳನನ್ನು ಕೊರಟಗೆರೆ ಸಿಪಿಐ ನದಾಫ್ ಮತ್ತು ಪಿಎಸೈ ನೇತೃತ್ವದ ಪೊಲೀಸರ ತಂಡ ಪತ್ತೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.
ಕೊರಟಗೆರೆ ತಾಲ್ಲೂಕು, ಚನ್ನರಾಯನದುರ್ಗ ಹೋಬಳಿ, ಬೂದಗವಿ ಗ್ರಾಪಂ ವ್ಯಾಪ್ತಿಯ, ಮಲ್ಲೇಕಾವು ಗ್ರಾಮದ ಕೆರೆಯ ಬಳಿ ಫಿಲ್ಟರ್ ಬಾವಿ ಹತ್ತಿರ ಮಹಿಳೆಯ ಕೊಲೆ ಆಗಿರುವ ಬಗ್ಗೆ 2021 ರ ಮಾ.12ರಂದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ರವಿಕುಮಾರ್ ಎಂಬಾತ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಕೊರಟಗೆರೆ ಮತ್ತು ಕೋಳಾಲ ಪೊಲೀಸರ ತಂಡ, ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಕೆರೆಕೋಡಿ ವಾಸಿಯಾದ ಲೇಟ್ ನರಸಪ್ಪನ ಮಗ ಶಿವಕುಮಾರ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಆರೋಪಿಯ ಪತ್ತೆಗೆ ಶ್ರಮಿಸಿದ ತುಮಕೂರು ಹೆಚ್ಚುವರಿ ಅಧೀಕ್ಷಕ ಉದೇಶ, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ, ಕೊರಟಗೆರೆ ಸಿಪಿಐ ನದಾಫ್, ಪಿಎಸೈ ಮುತ್ತುರಾಜು, ಸಿಬ್ಬಂದಿ ಗಂಗಾಧರ್, ವೆಂಕಟೇಶ್, ಸೋಮನಾಥ, ಸಿದ್ದಲಿಂಗಪ್ರಸನ್ನ, ಪಾಂಡುರಂಗರಾವ್, ಮೋಹನಕುಮಾರ್ ಮತ್ತು ನಾರಾಯಣ್ ನೇತೃತ್ವದ ತಂಡವನ್ನು ತುಮಕೂರು ಜಿಲ್ಲಾ ಮುಖ್ಯ ಪೊಲೀಸ್ ಅಧಿಕಾರಿ ಡಾ.ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
